ಕರ್ನಾಟಕ

karnataka

ETV Bharat / state

ಕಾಂಗ್ರೆಸ್‌ ಸೇರ್ತಾರಾ ಲಕ್ಷ್ಮಣ ಸವದಿ? ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಹೀಗಿದೆ..

ಲಕ್ಷ್ಮಣ್​ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಜಿಲ್ಲಾ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

KPCC Working President Satish Jarakiholi
ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌

By

Published : Apr 11, 2023, 4:11 PM IST

ಕಾಂಗ್ರೆಸ್‌ ಸೇರ್ತಾರಾ ಲಕ್ಷ್ಮಣ ಸವದಿ?

ಬೆಳಗಾವಿ :ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಜಿಲ್ಲಾ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ರಾಜ್ಯ ಮಟ್ಟದ ನಾಯಕರೊಂದಿಗೆ ಚರ್ಚೆ ಆಗಿದ್ದರೂ ಆಗಿರಬಹುದು, ನನಗೆ ಮಾಹಿತಿ ಇಲ್ಲ ಎಂದು ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಿಲ್ಲಿಯಲ್ಲಿ, ಬೆಂಗಳೂರಿನಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ನಮ್ಮನ್ನು‌ ಕೇಳಿಯೇ ಕೇಳುತ್ತಾರೆ. ಈಗೇನು? ಫೋನಿನಲ್ಲಿ ಕ್ಷಣಾರ್ಧದಲ್ಲಿಯೇ ಕೇಳಬಹುದು. ಆಗ ನಮ್ಮ ಅಭಿಪ್ರಾಯ ಹೇಳುತ್ತೇವೆ. ಆದರೆ ಸವದಿ ಪಕ್ಷ ಸೇರುವ ಬಗ್ಗೆ ಅಧಿಕೃತವಾಗಿಲ್ಲ ಎಂದರು.

ಇದನ್ನೂ ಓದಿ :ನಾನು ಕೇಳಿದ ಎಲ್ಲರಿಗೂ ಕಾಂಗ್ರೆಸ್ ಟಿಕೆಟ್​ ಸಿಕ್ಕಿಲ್ಲ: ಸತೀಶ ಜಾರಕಿಹೊಳಿ

ಸವದತ್ತಿ ಟಿಕೆಟ್ ವಂಚಿತ ಸೌರಭ್‌ಗೆ ಜೆಡಿಎಸ್ ಗಾಳ ಹಾಕುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಈಗಾಗಲೇ ಟಿಕೆಟ್ ವಂಚಿತರ ಜೊತೆಗೆ ನಾನು ಮಾತುಕತೆ ನಡೆಸಿದ್ದೇನೆ. ಮೂರನೇ ಪಟ್ಟಿ ನಾಳೆ ತಪ್ಪಿದರೆ, ನಾಡಿದ್ದು ಬಿಡುಗಡೆಯಾಗಲಿದೆ. ಕೊನೆ ಘಳಿಗೆಯಲ್ಲೂ ಅಭ್ಯರ್ಥಿಗಳ ಘೋಷಣೆ ಆಗಬಹುದು. ಈ ಹಿಂದೆ ಎಲ್ಲ‌ ಪಕ್ಷಗಳಲ್ಲಿಯೂ ಇದು ನಡೆದಿದೆ. ಮುಖಂಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಅದನ್ನು ‌ಮೀರಿ ಬೇರೆ ಪಕ್ಷಕ್ಕೆ ಹೋದರೆ ಏನೂ ಮಾಡಲಾಗದು ಎಂದು ಹೇಳಿದರು.

ಇದನ್ನೂ ಓದಿ :ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ತಾಯಿ - ಮಗ: ಚುನಾವಣೆಗೆ ಸ್ಪರ್ಧಿಸಲು ಸೌರಭ್​ ಚೋಪ್ರಾ ತೀರ್ಮಾನ

ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ದ ವಾಗ್ದಾಳಿ ನಡೆಸಿ, ಕುಮಾರಸ್ವಾಮಿ ಬೆಳಗಾವಿ ಅಷ್ಟೇ ಅಲ್ಲ, ರಾಜ್ಯದ ಬಹಳಷ್ಟು ‌ಜನರಿಗೆ ಫೋನ್ ಮಾಡಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಅಸಮಾಧಾನಿತರಿಗೆ ಆಹ್ವಾನ ನೀಡಿದ್ದರು ಎಂದು ಹೇಳಿದರು. ಯಮಕನಮರಡಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಅಗಲಿದ್ದಾರಾ ಎಂಬ ಬಗ್ಗೆ ಮಾತನಾಡಿ, ‌ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಬಿಜೆಪಿ ನಾಯಕರೇ ನಿರ್ಧರಿಸಬೇಕು. ನಾವು ವ್ಯಕ್ತಿಗತ ಅಲ್ಲ, ಬಿಜೆಪಿ ಅಭ್ಯರ್ಥಿ ‌ಎಂದುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಅವರಿಗೆ ನಯವಾಗಿ ತಿರುಗೇಟು ನೀಡಿದ ಲಕ್ಷ್ಮಣ್ ಸವದಿ

ABOUT THE AUTHOR

...view details