ಕರ್ನಾಟಕ

karnataka

ETV Bharat / state

ಕೊರೊನಾ ನಿಯಮ ಉಲ್ಲಂಘನೆಯಲ್ಲಿ ಬಿಜೆಪಿ ನಂಬರ್​ ಒನ್​: ಸತೀಶ್ ಜಾರಕಿಹೊಳಿ‌ - ಬೆಳಗಾವಿಗೆ ಸತೀಶ್ ಜಾರಕಿಹೊಳಿ‌ ಭೇಟಿ ಸುದ್ದಿ

ಕೋವಿಡ್ ನಿಯಮಗಳ ಉಲ್ಲಂಘನೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

belgavi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

By

Published : Jan 15, 2021, 2:15 PM IST

ಬೆಳಗಾವಿ: ಜಿಲ್ಲಾ ಕ್ರೀಡಾಂಗಣದಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ 10 ಸಾವಿರ ಜನರು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಂತಹದ್ದರಲ್ಲಿ 3-4 ಲಕ್ಷ ಜನರನ್ನು ಬಿಜೆಪಿಯವರು ಹೇಗೆ ಕೂರಿಸುತ್ತಾರೆ. ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಬಿಜೆಪಿ ವಿರುದ್ಧ ಹರಿಹಾಯ್ದರು‌.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗೃಹಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ಮೂರರಿಂದ ಐದು ಲಕ್ಷ ಜನರನ್ನು ಕೂಡಿಸುವುದಾಗಿ ಹೇಳಿರುವ ಬಿಜೆಪಿ, ಕೋವಿಡ್ ನಿಯಮಗಳನ್ನು ಹಿಂಪಡೆಯಬೇಕು. ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ನಂಬರ್ ಸ್ಥಾನದಲ್ಲಿದ್ದಾರೆ. ಸಾಕಷ್ಟು ಸಾರಿ ಹೇಳಿದ್ದೇವೆ. ವಿರೋಧಿಸಿದ್ದೇವೆ. ಜನರು ಬುದ್ಧಿ ಕಲಿಸುವ ತನಕ ಅವರು ಹಾಗೆ ಇರುತ್ತಾರೆ. ಅವರೇ ತಂದಿರುವ ನಿಯಮಗಳನ್ನು ಸಾಕಷ್ಟು ಸಲ ಗಾಳಿಗೆ ತೂರಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ಇರಬೇಕು" ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

"ಲಕ್ಷ ಜನರು ಸೇರುತ್ತಾರೆ ಎಂದು ಸವದತ್ತಿ ಯಲ್ಲಮ್ಮನ ಜಾತ್ರೆ ರದ್ದುಪಡಿಸಿದ್ದಾರೆ. ಅಮಿತ್ ಶಾ ಕಾರ್ಯಕ್ರಮಕ್ಕೆ 3-4 ಲಕ್ಷ ಜನರ ಸೇರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದ್ರೆ, ಜಿಲ್ಲಾ ಕ್ರೀಡಾಂಗಣದ ಸಾಮರ್ಥ್ಯವೇ ಕೇವಲ‌ 50 ಸಾವಿರ. ಮಾರ್ಗಸೂಚಿ ಪ್ರಕಾರ ನೋಡಿದರೆ 10 ಸಾವಿರ ಜನರು ಕೂಡುವುದಿಲ್ಲ. ಪಕ್ಷದಿಂದ ನಾವು ಹಲವು ಬಾರಿ ಜಿಲ್ಲಾ ಕ್ರೀಡಾಂಗದಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಇನ್ನು ಇವರು ನಾಲ್ಕು ಲಕ್ಷ ಜನರನ್ನು ಹೇಗೆ ಕೂಡಿಸುತ್ತಾರೆ. ಹೀಗಾಗಿ ಬಿಜೆಪಿ ಕೋವಿಡ್ ಮಾರ್ಗಸೂಚಿ ಹಿಂಪಡೆಯಬೇಕು. ಈ ಬಗ್ಗೆ‌ ಕಾಂಗ್ರೆಸ್ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡೋದಿಲ್ಲ. ಹೊರತಾಗಿ ಇದನ್ನು ಜನತಾ ನ್ಯಾಯಲಯಕ್ಕೆ ಬಿಡುತ್ತೇವೆ.‌ ಜನರೇ ಇದನ್ನು ತೀರ್ಮಾನ ಮಾಡ್ತಾರೆ. ಒಂದು ವೇಳೆ, ಅವಶ್ಯಕತೆ ಬಿದ್ದಲ್ಲಿ ಕಾನೂನು ಬದ್ಧವಾಗಿ ಹೋರಾಟವನ್ನೂ ಮಾಡಲಾಗುವುದು" ಎಂದು ವಾಗ್ದಾಳಿ ನಡೆಸಿದರು.

ABOUT THE AUTHOR

...view details