ಬೆಳಗಾವಿ:ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿಯವರ ನೂತನ ವಾಹನಕ್ಕೆ ಬೇಲೂರಿನ ನಿಜಗುಣ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಮೌಢ್ಯ ಮುರಿದು ಸ್ಮಶಾನದಲ್ಲಿ ತಮ್ಮ ನೂತನ ವಾಹನಕ್ಕೆ ಚಾಲನೆ ನೀಡಿದ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮೌಢ್ಯ ವಿರೋಧಿಸಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಾವು ನೂತನವಾಗಿ ಖರೀದಿಸಿರುವ KA-49,N-2023 ನಂಬರಿನ ಫಾರ್ಚೂನರ್ ವಾಹನವನ್ನು ಸ್ಮಶಾನದಿಂದಲೇ ಚಾಲನೆ ನೀಡುವ ಮೂಲಕ ಮೌಢ್ಯ ವಿರೋಧಿಸಿದರು.
ಹೊಸದಾಗಿ ಖರೀದಿಸಿದ ವಾಹನಗಳನ್ನು ಒಳ್ಳೆಯ ಮೂಹರ್ತ ನೋಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಪುನಸ್ಕಾರ ಮಾಡಿಸುವುದು ಅನುಸರಿಸಿಕೊಂಡು ಬಂದಿರುವ ಪದ್ಧತಿ. ಹಾಗೇ ಸ್ಮಶಾನ ಎಂದರೆ ಒಂದು ರೀತಿಯ ನಕಾರಾತ್ಮಕ ಧೋರಣೆ. ಆದರೆ ಇದಕ್ಕೆಲ್ಲ ವಿರುದ್ಧವಾಗಿ ಇಂದು ಸತೀಶ್ ಜಾಕಿಹೊಳಿ ಸ್ಮಶಾನದಲ್ಲಿ ತಮ್ಮ ಕಾರಿಗೆ ಚಾಲನೆ ನೀಡಿದರು.
ಈ ವೇಳೆ ಬೇಲೂರು ಮಠದ ನಿಜಗುಣಾನಂದ ಸ್ವಾಮೀಜಿ, ಮೈಸೂರಿನ ಜ್ಞಾನ ಪ್ರಕಾಶ ಸ್ಮಾಮೀಜಿ ಸೇರಿದಂತೆ ನಾಡಿನ ಇತರ ಸ್ವಾಮೀಜಿಗಳು ಇದ್ದರು.