ಚಿಕ್ಕೋಡಿ:ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಅಲ್ಲಿಂದ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಿಗೆ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಗೆಸ್ಟ್ಹೌಸ್ನಲ್ಲಿಯೇ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಿದ್ದು, ಅವರಿಗೆ ಊಟ, ಉಪಚಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮುಂಬೈ ಕಾರ್ಮಿಕರಿಗೆ ತಮ್ಮ ಗೆಸ್ಟ್ಹೌಸ್ನಲ್ಲೇ ಕ್ವಾರಂಟೈನ್ ವ್ಯವಸ್ಥೆ ಮಾಡಿದ ಸತೀಶ್ ಜಾರಕಿಹೊಳಿ ರಾಜ್ಯದಿಂದ ಬೇರೆ ಬೇರೆ ರಾಜ್ಯಗಳಲ್ಲಿ ದುಡಿಯಲು ಹೊಂದಂತ ಸಾವಿರಾರು ಬಡ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಆಗಮಿಸುತ್ತಿದ್ದಾರೆ. ಈ ಮಹಾಮಾರಿ ಕೊರೊನಾದಿಂದ ವಲಸೆ ಕಾರ್ಮಿಕರು ಯಾವುದೇ ಕೆಲಸವಿಲ್ಲದೇ ಅವರ ಬದುಕು ಬೀದಿಗೆ ಬಿದ್ದಿದ್ದು, ಅಲ್ಲಿಂದ ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಿದ್ದಾರೆ.
ಅದರಂತೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಗೆಸ್ಟ್ಹೌಸ್ನಲ್ಲೇ ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾರ್ಮಿಕರಿಗೆ ತಮ್ಮ ಸ್ವಂತ ದುಡ್ಡಿನಲ್ಲೇ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದು, ಇತರ ರಾಜಕೀಯ ನಾಯಕರಿಗೂ ಮಾದರಿಯಾಗಿದ್ದಾರೆ.
ಮುಂಬೈ ಕಾರ್ಮಿಕರಿಗೆ ತಮ್ಮ ಗೆಸ್ಟ್ಹೌಸ್ನಲ್ಲೇ ಕ್ವಾರಂಟೈನ್ ವ್ಯವಸ್ಥೆ ಮಾಡಿದ ಸತೀಶ್ ಜಾರಕಿಹೊಳಿ ಈ ಹಿಂದೆಯೂ ತಮ್ಮ ಕ್ಷೇತ್ರದ ರೈತರ ಬೆನ್ನಿಗೆ ನಿಂತಿದ್ದ ಸತೀಶ್ ಜಾರಕಿಹೊಳಿ, ರೈತರು ಬೆಳೆದ ಬೆಳೆಗಳನ್ನು ಖರೀದಿಸಿ ಬಡ ಕುಟುಂಬಗಳಿಗೆ ಉಚಿತವಾಗಿ ಹಂಚಿಕೆ ಮಾಡಿದ್ದರು. ಇದೀಗ ಮತ್ತೆ ವಲಸೆ ಕಾರ್ಮಿಕರಿಗೆ ತಮ್ಮ ಗೆಸ್ಟ್ಹೌಸ್ನಲ್ಲೇ ಆಶ್ರಯ ನೀಡುವ ಮೂಲಕ ಕಾರ್ಮಿಕರ ನೆರವಿಗೆ ಮುಂದಾಗಿದ್ದರೆ. ಇನ್ನು ಶಾಸಕರ ಈ ಕಾರ್ಯಕ್ಕೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.