ಕರ್ನಾಟಕ

karnataka

By

Published : Apr 28, 2020, 10:09 AM IST

ETV Bharat / state

ಬಿಜೆಪಿಗರು ಜನರಿಗೆ ಮೌಢ್ಯಾಚರಣೆಗಳನ್ನು ಹೇಳಿಕೊಡ್ತಿದಾರೆ: ಶಾಸಕ ಸತೀಶ್​ ಜಾರಕಿಹೊಳಿ

ಅಥಣಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಸತೀಶ್​ ಜಾರಕಿಹೊಳಿ, ಆಡಳಿತ ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ವರದಿ ಒಪ್ಪಿಸಲು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಟಾಸ್ಕ್​​ ಫೋರ್ಸ್​ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಬಿಜೆಪಿಗರು ಜನರಿಗೆ ಮೌಢ್ಯಾಚರಣೆ ಬಗ್ಗೆ ಹೇಳಿಕೊಡ್ತಿದಾರೆ ಎಂದು ಆರೋಪಿಸಿದರು.

Satish jaraki holi
ಶಾಸಕ ಸತೀಶ್​ ಜಾರಕಿಹೊಳಿ

ಅಥಣಿ: ಕೇವಲ ಮೋದಿಯವರು ಹೇಳಿದ ಹಾಗೆ ಚಪ್ಪಾಳೆ ಹೊಡೆಯುವುದರಿಂದ, ದೀಪ ಹಚ್ಚುವುದರಿಂದ ಹಾಗೂ ಜಾಗಟೆ ಬಾರಿಸುವುದರಿಂದ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಶಾಸಕ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗರು ಜನರಿಗೆ ಮೌಢ್ಯಾಚರಣೆಗಳನ್ನು ಹೇಳಿಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಇನ್ನು, ಆಡಳಿತ ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ವರದಿ ಒಪ್ಪಿಸಲು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಟಾಸ್ಕ್​​ ಫೋರ್ಸ್​ ರಚಿಸಲಾಗಿದೆ. ಈ ಮೂಲಕ ಜನರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ಕೊರೊನಾ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಲೋಪದೋಷವನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇವೆ ಎಂದರು.

ಅಲ್ಲದೆ ಲಾಕ್‌ಡೌನ್​​ನಿಂದಾಗಿ ರೈತರಿಗೆ ಹಾಗೂ ದಿನಗೂಲಿ ನೌಕರರಿಗೆ ಅನಾನುಕೂಲ ಆಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕುಟುಂಬಗಳನ್ನು ಸಾಕುವುದು ಕಷ್ಟವಾಗಿದೆ. ರೈತರು ಬೆಳೆದ ಬೆಳೆಯನ್ನು ಸರ್ಕಾರ ಖರೀದಿಸದೇ ಇರುವುದರಿಂದ ರೈತರಿಗೆ ಅಪಾರ ನಷ್ಟವಾಗಿದೆ. ಒಂದು ವೇಳೆ ಸರ್ಕಾರ ರೈತರು ಬೆಳೆದ ಬೆಳೆಗಳನ್ನು ಖರೀದಿ ಮಾಡದೆ ಇದ್ದರೆ ಲಾಕ್‌ಡೌನ್ ಮುಗಿದ ಬಳಿಕ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಅಥಣಿ ಪಟ್ಟಣದ ವಿವಿಧ ವಾರ್ಡ್​ಗಳಿಗೆ ಭೇಟಿ ನೀಡಿದ್ದ ಶಾಸಕ ಸತೀಶ್​ ಜಾರಕಿಹೊಳಿ ಪರಿಶೀಲನೆ ನಡೆಸಿದರು. ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರು ಕೆಪಿಸಿಸಿ ಕೊರೊನಾ ಪರಿಹಾರ ನಿಧಿಗೆ ವೈಯಕ್ತಿಕವಾಗಿ 50 ಸಾವಿರ ರೂ.ಗಳ ಚೆಕ್ ನೀಡಿದರು. ಹಾಗೆ ಇನ್ನೊಬ್ಬ ಕಾಂಗ್ರೆಸ್​​ ಮುಖಂಡ ರಮೇಶ್​ ಸಿಂದಗಿ ಅವರು 11 ಸಾವಿರ ರೂ.ಗಳ ಚೆಕ್​ ನೀಡಿದರು.

ABOUT THE AUTHOR

...view details