ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಪಕ್ಷಕ್ಕೆ ಹಾನಿ ತಡೆಯಲು ನನ್ನ ಹೇಳಿಕೆ ವಾಪಸ್ ಪಡೆದಿದ್ದೇನೆ‌: ಸತೀಶ್ ಜಾರಕಿಹೊಳಿ - ಕಾಂಗ್ರೆಸ್​ ಪಕ್ಷಕ್ಕೆ ಹಾನಿ ತಡೆಯಲು ನನ್ನ ಹೇಳಿಕೆ ವಾಪಸ್

ಕಾಂಗ್ರೆಸ್​ ಪಕ್ಷಕ್ಕೆ ಹಾನಿಯಾಗುವುದನ್ನು ತಡೆಯಲು ನಾನು ನನ್ನ ಹೇಳಿಕೆಯನ್ನು ವಾಪಸ್​​ ಪಡೆದಿದ್ದೇನೆ. ಈ ಬಗ್ಗೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

sathish-jarkiholi-withdraw-his-controversial-statement
ನನ್ನ ಪಕ್ಷಕ್ಕೆ ಹಾನಿ ಆಗುವುದನ್ನು ತಡೆಯಲು ನನ್ನ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ‌ : ಸತೀಶ ಜಾರಕಿಹೊಳಿ

By

Published : Nov 10, 2022, 3:17 PM IST

Updated : Nov 10, 2022, 4:03 PM IST

ಬೆಳಗಾವಿ : ಕಾಂಗ್ರೆಸ್​ ಪಕ್ಷಕ್ಕೆ ಹಾನಿ ಆಗುವುದನ್ನು ತಡೆಯಲು ನನ್ನ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ‌. ನನಗೆ ಪಕ್ಷ ದೊಡ್ಡದು. ಹೀಗಾಗಿ ಪಕ್ಷಕ್ಕೆ ಹಾನಿ​ ಆಗಬಾರದೆಂದು ಆ ಪದವನ್ನು ವಾಪಸ್ ಪಡೆದಿರುವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಾನು ಆಡಿದ್ದ ಮಾತನ್ನು ವಾಪಸ್ ಪಡೆಯುವಂತೆ ಒತ್ತಡ ಇತ್ತು. ಬೇರೆ ಬೇರೆ ಕಾರಣಗಳಿಂದ ಒತ್ತಡ ಇತ್ತು. ನನ್ನ ಹೇಳಿಕೆಯನ್ನು ವಾಪಸ್ ಪಡೆದಿರುವೆ. ನಿನ್ನೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸಿ ವಾಪಸ್ ಪಡೆದಿದ್ದೇನೆ‌ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ ಪಕ್ಷಕ್ಕೆ ಹಾನಿ ತಡೆಯಲು ನನ್ನ ಹೇಳಿಕೆ ವಾಪಸ್ ಪಡೆದಿದ್ದೇನೆ‌: ಸತೀಶ್ ಜಾರಕಿಹೊಳಿ

ಬೇರೆ ಬೇರೆ ಆಯಾಮದಲ್ಲಿ ಚರ್ಚೆ ಆರಂಭ :ಹೇಳಿಕೆ ಸಂಬಂಧ ನೈಜ ಸುದ್ದಿ ಬಿಟ್ಟು ಬೇರೆ ಬೇರೆ ಆಯಾಮದಲ್ಲಿ ಚರ್ಚೆ ಆರಂಭ ಆಗಿದೆ. ವೈಯಕ್ತಿಕವಾಗಿ ನನ್ನಿಂದ ಪಕ್ಷಕ್ಕೆ ಹಾನಿಯಾಯಿತು. ಬೇರೆ ನಾಯಕರು ನನ್ನ ಹೇಳಿಕೆಯನ್ನು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಅದು ಖಾಸಗಿ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಅಲ್ಲ, ಎಲ್ಲರೂ ಬೆಂಬಲಿಸುವ ನಿರೀಕ್ಷೆ ಇರಲಿಲ್ಲ. ಆದರೂ ಕೆಲವರು ಮಾತನಾಡಿದ್ದಾರೆ ಎಂದರು.

ಇದು ಇಷ್ಟಕ್ಕೆ ನಿಂತಿಲ್ಲ. ಸ್ವಪಕ್ಷ, ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಮುಂದೆ ಕೆಲ ಸಂಗತಿ ಹೇಳುತ್ತೇವೆ. ನನ್ನ ಮೇಲಿನ ಆರೋಪದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ನನ್ನ ಪತ್ರದ ಬಗ್ಗೆ ತನಿಖೆ ಮಾಡಬೇಕು ಎಂದು ಸತೀಶ್​ ಜಾರಕಿಹೊಳಿ ಆಗ್ರಹಿಸಿದರು.

ಇದನ್ನೂ ಓದಿ :ಸತೀಶ್ ಜಾರಕಿಹೊಳಿ ದುಡುಕುವವರಲ್ಲ, ಕಾಂಗ್ರೆಸ್ ಸಹವಾಸ, ಸಂಸ್ಕೃತಿಯ ಪ್ರಭಾವದಿಂದ ಹೀಗಾಗಿದೆ: ಸಿಎಂ ಬೊಮ್ಮಾಯಿ

Last Updated : Nov 10, 2022, 4:03 PM IST

ABOUT THE AUTHOR

...view details