ಬೆಳಗಾವಿ:ಅಧ್ಯಕ್ಷೆ ಆಕಾಂಕ್ಷಿತ ಮಹಿಳೆಯನ್ನು ಎಳೆದಾಡಿದ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಇತರರು ಅಸಭ್ಯ ವರ್ತನೆ ತೋರಿರುವುದು ಕೆಟ್ಟ ಸಂಪ್ರದಾಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಮಹಿಳೆಯನ್ನು ಎಳೆದಾಡಿದ ಬಿಜೆಪಿ ಶಾಸಕ ಸಿದ್ದು ಸವದಿ ವರ್ತನೆ ಕೆಟ್ಟ ಸಂಪ್ರದಾಯ; ಸತೀಶ್ ಜಾರಕಿಹೊಳಿ - ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸುದ್ದಿ
ಘಟನೆಗೆ ಸಂಬಂಧಿಸಿದಂತೆ ಅಸಭ್ಯವಾಗಿ ನಡೆದುಕೊಂಡ ಎಲ್ಲರ ಮೇಲೆಯೂ ಪೊಲೀಸರು ಹಾಗೂ ಸರಕಾರ ಈ ಕೂಡಲೇ ಕ್ರಮಕೈಗೊಳ್ಳಬೇಕು..
ಜಾರಕಿಹೊಳಿ
ಗೋಕಾಕ ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆಗೆ ಸಂಬಂಧಿಸಿದಂತೆ ನಡೆದ ಘಟನೆಯು ಒಂದು ಕೆಟ್ಟ ಸಂಪ್ರದಾಯವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುವುದನ್ನು ನಾವು ಖಂಡಿಸುತ್ತೇವೆ. ಈ ಸಂಬಂಧ ನಮ್ಮ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಅಸಭ್ಯವಾಗಿ ನಡೆದುಕೊಂಡ ಎಲ್ಲರ ಮೇಲೆಯೂ ಪೊಲೀಸರು ಹಾಗೂ ಸರಕಾರ ಈ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.