ಗೋಕಾಕ್ : ನಗರದಲ್ಲಿ ಅಭಿವೃದ್ಧಿಗೆ ಸ್ಪಂದಿಸುವವರು ಜನ ಪ್ರತಿನಿಧಿಗಳಾಗಬೇಕು. ಜನರು ಜಾಗೃತರಾಗಿ ಬದಲಾವಣೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಕರೆ ನೀಡಿದ್ದಾರೆ.
ಅಣ್ಣ ರಮೇಶ್ ಅಳಿಯನ ವಿರುದ್ಧ ಸತೀಶ್ ಜಾರಕಿಹೊಳಿ ಸಿಡಿಮಿಡಿ: ಅಭಿವೃದ್ಧಿಗೆ ಮತ ನೀಡಲು ಕರೆ - ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ
ನಗರದಲ್ಲಿ ಅಭಿವೃದ್ಧಿಗೆ ಸ್ಪಂದಿಸುವವರು ಜನ ಪ್ರತಿನಿಧಿಗಳಾಗಬೇಕು. ಜನರು ಜಾಗೃತರಾಗಿ ಬದಲಾವಣೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಕರೆ ನೀಡಿದ್ದಾರೆ.
ಮಂಗಳವಾರ ರಾತ್ರಿ ನಗರದಲ್ಲಿ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಸ್ವಚ್ಛತಾ ಕಾರ್ಯ ಕೈಗೊಂಡ ನಾವು ನಮ್ಮ ಸಂಸ್ಥೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಗೋಕಾಕ್ ನಗರ ಸೇರಿದಂತೆ 40 ಗ್ರಾಮಗಳನ್ನು ಸ್ವಚ್ಛಗೋಳಿಸಿದರೆ, ಇಲ್ಲಿನ ನಗರಸಭೆಯವರು ಕೇವಲ 80 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಕುರಿತು ನಗರ ಸಭೆಯವರೇ ನೀಡಿದ ಅಧಿಕೃತ ದಾಖಲೆ ನಮ್ಮಲ್ಲಿ ಇದೆ ಎಂದು ತಿಳಿಸಿದರಲ್ಲದೇ ಒಂದು ಟ್ರ್ಯಾಕ್ಟರ್ ಟ್ರಿಪ್ ಗೆ 400 ರೂ. ಬದಲಾಗಿ 1200 ರೂ. ಖರ್ಚು ತೋರಿಸಿ ಲಕ್ಷಾಂತರ ರೂ. ಅಂಬಿರಾವ್ ಪಾಟೀಲ್ ಹಾಗೂ ಎಸ್.ಎ.ಕೋತವಾಲ್ ತಮ್ಮ ಜೇಬಿಗೆ ಇಳಿಸಿದ್ದಾರೆ. ಇಂತಹ ರಾವಣರ ಆಡಳಿತ ಅಂತ್ಯವಾಗಿದ್ದು, ರಾಮ ರಾಜ್ಯ ಸ್ಥಾಪನೆಯಾಗಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಶತಮಾನಗಳ ಇತಿಹಾಸ ಹೊಂದಿರುವ ಪಾಲ್ಸ್ ಮಿಲ್ಲ್ 8 ಸಾವಿರ ಕಾರ್ಮಿಕರಿಂದ ಏಳು ನೂರಕ್ಕೆ ಇಳಿದಿದೆ, ಇದಕ್ಕೆ ಕಾರಣ. ರಿದ್ದಿ - ಸಿದ್ದಿ ಕಾರ್ಖಾನೆಗೆ ಇದೇ ಗತಿ ಬರುವುದು ಖಚಿತ. ಜನೋಪಕಾರಿಗಳು ಎಂದು ಖಾಲಿ ಕೈಯಿಂದ ಬಂದು ತಮ್ಮ ಜೇಬು ತುಂಬಿಸಿಕೊಂಡು ಮಹಾರಾಷ್ಷ್ರಕ್ಕೆ ಹೋಗುತ್ತಿದ್ದಾರೆ ಎಂದು ಅಂಬಿರಾವ್ ಪಾಟೀಲ್ ವಿರುದ್ಧ ಸತೀಶ್ ಜಾರಕಿಹೊಳಿ ಹರಿಹಾಯ್ದರು