ಕರ್ನಾಟಕ

karnataka

ETV Bharat / state

ಗಡಿ ಭಾಗದ ಅಭಿವೃದ್ಧಿ ಕುರಿತು ಸಿಎಂ ಪುಸ್ತಕ ಬಿಡುಗಡೆ ಮಾಡಲಿ: ಸತೀಶ್​​​ ಜಾರಕಿಹೊಳಿ - ಬೈ ಎಲೆಕ್ಷನ್‍ಗೆ ಟಿಕೆಟ್ ವಿಚಾರಕ್ಕೆ ಜಾರಕಿಹೊಳಿ ಪ್ರತಿಕ್ರಿಯೆ

ಬೆಳಗಾವಿ ಗಡಿ ಭಾಗದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಬಳಸಿಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ. ಈ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಪುಸ್ತಕ ಬಿಡುಗಡೆ ಮಾಡಲಿ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

sathish jarkiholi pressmeet in belgavi
ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ ಹೇಳಿಕೆ

By

Published : Jan 31, 2021, 4:54 PM IST

ಬೆಳಗಾವಿ: ಹತ್ತು ವರ್ಷದಲ್ಲಿ ಗಡಿ ಭಾಗದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಸಿಎಂ ಯಡಿಯೂರಪ್ಪ ಈ ಕುರಿತಂತೆ ಪುಸ್ತಕ, ವಿಡಿಯೋ ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾವು ಯಾವ ಹಂತದಲ್ಲಿಯೂ ಮರಾಠಿಗರಿಗೆ ಅನ್ಯಾಯ ಮಾಡಿಲ್ಲ. ಕಳೆದ 10 ವರ್ಷದಲ್ಲಿ ಯಮಕನಮರಡಿ, ನಿಪ್ಪಾಣಿ ಹಾಗೂ ಗ್ರಾಮೀಣ ಭಾಗದ ಮರಾಠಿ ಕ್ಷೇತ್ರದಲ್ಲಿ ಕನ್ನಡ ಶಾಲೆಗೆ ನೀಡಿದ ಪ್ರಾಮುಖ್ಯತೆ ಮರಾಠಿ ಶಾಲೆಗೂ ಕೊಟ್ಟಿದ್ದೇವೆ. ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದಂತೆ ಕರ್ನಾಟಕ ಸರ್ಕಾರ ಕೂಡ ಅಂಕಿ-ಅಂಶ ಇಟ್ಟುಕೊಂಡು ಪುಸ್ತಕ ಬಿಡುಗಡೆ ಮಾಡಲಿ‌ ಎಂದರು.
ಈ ಹಿಂದೆ ರಾಜ್ ಠಾಕ್ರೆ ಕೂಡ ಒಂದು ಹೇಳಿಕೆ ಕೊಟ್ಟಿದ್ರು. 'ಕರ್ನಾಟಕದಲ್ಲೇ ಚೆನ್ನಾಗಿ ಇದ್ದೀರಿ, ಅಲ್ಲೇ ಉಳೀರಿ. ನಮ್ದೇ ಸಾಕಷ್ಟು ಸಮಸ್ಯೆ ಇದೆ' ಎಂದು ಹೇಳಿಕೆ ನೀಡಿದ್ದರು. ಅದನ್ನು ಉದ್ಧವ್ ಠಾಕ್ರೆ ಒಮ್ಮೆ ಕೇಳಿಸಿಕೊಳ್ಳಬೇಕು. ಸುಖಾಸುಮ್ಮನೆ ರಾಜಕೀಯ ಹೇಳಿಕೆ ನೀಡಬಾರದು. ಮುಂಬೈಯನ್ನು ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರದವರು ಪಡೆಯಲು ಸಾಧ್ಯವಿಲ್ಲ. ರಾಜಕೀಯ ಮಾಡುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರಷ್ಟೇ. ಸೀರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ನಾಳೆನ ಬಜೆಟ್ ನಿರಾಸೆಯಿಂದಲೇ ಕೂಡಿರುತ್ತದೆ. ಕೋವಿಡ್ ಇಲ್ಲದೇ ಇರುವಾಗಲೇ ಏನು ಮಾಡಲು‌ ಸಾಧ್ಯವಾಗಿಲ್ಲ. ಇನ್ನು ಕೋವಿಡ್ ನೆಪ ಹೇಳುತ್ತಾರೆ. ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಯಿಂದ ಏನೂ ‌ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಾಳೆಯ ಬಜೆಟ್​ನಲ್ಲಿ ಸಾಕಷ್ಟು ಅನುದಾನ ನೀಡುವ ನಿರೀಕ್ಷೆ ಇಲ್ಲ ಎಂದರು.
ಬೈ ಎಲೆಕ್ಷನ್‍ಗೆ ಟಿಕೆಟ್ ವಿಚಾರಕ್ಕೆ, ಚುನಾವಣೆಗೆ ಅಭ್ಯರ್ಥಿ ಘೋಷಣೆ ಚರ್ಚೆ ಹಂತದಲ್ಲಿದ್ದು, ಇನ್ನೂ ಫೈನಲ್ ಆಗಿಲ್ಲ. ರಾಹುಲ್​ ಗಾಂಧಿ ಫೂನ್ ಮಾಡಿಲ್ಲ. ನನ್ನ ಹೆಸರು‌ ಶಿಫಾರಸು ಮಾಡಿದ್ದಾರೆ. ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ ಹೆಸರು ಹೈಕಮಾಂಡ್​ಗೆ ಬಿಟ್ಟ ವಿಚಾರ. ಅಭ್ಯರ್ಥಿ ಆಯ್ಕೆ ನನ್ನ ಹಂತದಲ್ಲಿ ಇಲ್ಲ. ಅಭ್ಯರ್ಥಿ ಆಯ್ಕೆ ಮಾಡುವ ಸಭೆಯಲ್ಲಿ ಅವ್ರು‌ ಇದ್ರೂ ಆಸಕ್ತಿ ತೋರಿಸಿದ್ರು. ಆದ್ರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ. ಚುನಾವಣೆ ಮೇಲೆ ಯಾವುದೇ ರೀತಿಯ ಪ್ರಭಾವ ಬೀರೋದಿಲ್ಲ. ಅವ್ರು ಚಿಕ್ಕೋಡಿ ಕ್ಷೇತ್ರಕ್ಕೆ ಪ್ರತಿನಿಧಿಸುತ್ತಿದ್ದರು. ಮತ್ತೆ ಅಲ್ಲಿ ಸ್ಪರ್ಧೆ ಮಾಡಬೇಕಾದ್ರೆ ಅಲ್ಲಿ ಅವಕಾಶವಿದೆ. ಇಲ್ಲಿ ಬೇರೆಯವರು ಮಾಡ್ತಾರೆ ಎಂದ್ರು.

For All Latest Updates

TAGGED:

ABOUT THE AUTHOR

...view details