ಬೆಳಗಾವಿ:ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲವಿತ್ತು. ಸದ್ಯ ಕಾಗವಾಡ ಮಾಜಿ ಶಾಸಕ ರಾಜು ಕಾಗೆಗೆ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಿಕ್ಸ್ ಆಗಿರುವುದರಿಂದ ಸಂಜೆ 5 ಗಂಟೆಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಥಣಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.
ಅಥಣಿಗೆ ಇಂದು ಸತೀಶ್ ಜಾರಕಿಹೊಳಿ ಭೇಟಿ: ಕಾಂಗ್ರೆಸ್ ಮುಖಂಡರ ಜೊತೆ ಸಭೆ - ಬೆಳಗಾವಿ ಅಥಣಿ ವಿಧಾನಸಭಾ ಕ್ಷೇತ್ರ ನ್ಯೂಸ್
ಕಾಗವಾಡ ಮಾಜಿ ಶಾಸಕ ರಾಜು ಕಾಗೆಗೆ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಿಕ್ಸ್ ಆಗಿದ್ದು, ಪಕ್ಷದ ಮುಖಂಡರು ಅಸಮಧಾನಗೊಳ್ಳುವ ಸಾಧ್ಯತೆ ಇರುವ ಹಿನ್ನಲೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಇಂದು ಅಥಣಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.

ಸುಮಾರು 20 ಮಂದಿ ಅಥಣಿ ಕಾಂಗ್ರೆಸ್ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅವರು, ನಾವು 20 ಜನ ಅಥಣಿಯ ಪ್ರಮುಖ ನಾಯಕರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡವುದರಲ್ಲಿ ನಮ್ಮ ಸಮ್ಮತಿ ಇದೆ. ಆದರೆ, ಹೊರಗಿನವರಿಗೆ ಅವಕಾಶ ಮಾಡಿಕೊಡಬೇಡಿ. ಬೇರೆಯವರಿಗೆ ಅಥಣಿಯಲ್ಲಿ ಸ್ಪರ್ಧಿಸಲು ಮಾಡಲು ನಾವು ಬಿಡಲ್ಲ ಎಂದು ಸತೀಶ್ ಜಾರಕಿಹೊಳಿ ಹಾಗೂ ಎಂ ಬಿ ಪಾಟೀಲ್ ಎದುರು ಬಹಿರಂಗ ಸಭೆಯಲ್ಲಿ ಹೇಳಿದ್ದರು.
ಆದ್ರೆ ಈಗ ಪಕ್ಕದ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅಥಣಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗಿದೆ. ಇದು ಅಥಣಿ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನರಿತ ಸತೀಶ್ ಜಾರಕಿಹೊಳಿ ಇಂದು ಸಂಜೆ 5 ಗಂಟೆಗೆ ಸದಾಶಿವ ಬುಟಾಳಿ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಏರ್ಪಡಿಸಿದ್ದಾರೆ.