ಕರ್ನಾಟಕ

karnataka

ETV Bharat / state

ಗೋಕಾಕ್​​ ಪೊಲೀಸರು ಅಮಿತ್​ ಶಾ ಅವರನ್ನು ಬಂಧಿಸಬಹುದು, ಭೀಮಶಿಯನ್ನಲ್ಲ ; ಸತೀಶ್ ಜಾರಕಿಹೊಳಿ - chikkodi news 2020

ಭೀಮಶಿ ಭರಮನ್ನವರ್‌ಗೆ ಇದೇನು ಹೊಸದಲ್ಲ, ಇಂತಹ ನೂರಾರು ಕೇಸ್ ಮಾಡಿದ್ದಾರೆ. ಅವರ ನೂರಾರು ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ. ಇವರ ಜೊತೆ ಎತ್ತಿನಮನೆ, ಸುರೇಶ ಸನದಿ, ದುರ್ಗಣ್ಣವರ, ರಿಯಾಜ್ ದೇಸಾಯಿ ಇನ್ನೂ ನಾಲ್ಕು ಜನ ಗೋಕಾಕ್​ನ ರಾಜಕೀಯ ನಿಯಂತ್ರಣ ಮಾಡುತ್ತಾರೆ..

sathish-jarakihi-talking-about-bhimeshi-baramanna
ಸತೀಶ್ ಜಾರಕಿಹೊಳಿ

By

Published : Jul 10, 2020, 2:36 PM IST

ಚಿಕ್ಕೋಡಿ :ಗೋಕಾಕ್​‌ ಪೊಲೀಸರು ಅಮಿತ್​​ ಶಾ ಅವರನ್ನು ಬಂಧಿಸುತ್ತಾರೆ. ಆದರೆ, ವೈದ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ ಮತ್ತು ಸಂಗಡಿಗರನ್ನು ಬಂಧಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​​ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ವೈದ್ಯರಿಗೆ ಬ್ಲ್ಯಾಕ್‌ಮೇಲ್​ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದ ಭೀಮಶಿ ಭರಮನ್ನವರ ಹಾಗೂ ಸಂಗಡಿಗರನ್ನು ಹಿಡಿಯಲು​​ ಪೊಲೀಸರಿಗೆ ಸಾಧ್ಯವಿಲ್ಲ. ಕಾರಣ ಭರಮನ್ನ ಅವರು ಹೇಳಿದಂತೆ ಅಲ್ಲಿನ ಪೊಲೀಸರು ಕೇಳಬೇಕಾಗುತ್ತದೆ. ಅವರು ಅಸಹಾಯಕರಾಗಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಭೀಮಶಿ ಭರಮನ್ನವರ್‌ಗೆ ಇದೇನು ಹೊಸದಲ್ಲ, ಇಂತಹ ನೂರಾರು ಕೇಸ್ ಮಾಡಿದ್ದಾರೆ. ಅವರ ನೂರಾರು ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ. ಇವರ ಜೊತೆ ಎತ್ತಿನಮನೆ, ಸುರೇಶ ಸನದಿ, ದುರ್ಗಣ್ಣವರ, ರಿಯಾಜ್ ದೇಸಾಯಿ ಇನ್ನೂ ನಾಲ್ಕು ಜನ ಗೋಕಾಕ್​ನ ರಾಜಕೀಯವನ್ನು ನಿಯಂತ್ರಣ ಮಾಡುತ್ತಾರೆ ಎಂದು ಆರೋಪಿಸಿದರು.

ನಂತರ ಮಾತನಾಡಿದ ಅವರು, ರಾಜಕೀಯ ಪ್ರಭಾವದಿಂದ ಅವರು ಬಚಾವ್ ಆಗಿ ಬರ್ತಾಯಿದ್ದಾರೆ. ಆದರೆ, ಗೋಕಾಕ್​ನಲ್ಲಿ ಇದೇ ಮೊದಲ ಬಾರಿಗೆ ವೈದ್ಯ ಶ್ರೀಶೈಲ ಹೊಸಮನಿ ಧೈರ್ಯ ಮಾಡಿದ್ದು, ಇವರು ಎಸ್‌ಪಿ ಗಮನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನು ಓದಿ:ವೈದ್ಯರಿಗೆ ಧಮಕಿ ಹಾಕಿದವರ ವಿರುದ್ಧ ಪ್ರಕರಣ ದಾಖಲು!

ABOUT THE AUTHOR

...view details