ಕರ್ನಾಟಕ

karnataka

ETV Bharat / state

ಇದೇನು ಅವರ ಸ್ವತ್ತಲ್ಲ.. ಕರ್ನಾಟಕದ ರಕ್ಷಣೆಗೆ ನಾವೆಲ್ಲ ಸಮರ್ಥರಿದ್ದೇವೆ : ಶಶಿಕಲಾ ಜೊಲ್ಲೆ - Sasikala Jolle reaction to Maharatsra DCM Ajith pavar statement

ಇದೇನು ಅವರ ಸ್ವತ್ತಲ್ಲ. ಕರ್ನಾಟಕ ಭಾಷಾವಾರು ಪ್ರಾಂತ್ಯ ಆದಾಗ ವಿಂಗಡಣೆ ಆಗಿದೆ. ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಇರುವಾಗ ಈ ರೀತಿ ಮಾತನಾಡುವುದು ತಪ್ಪು ಎಂದು ಸಚಿವೆ ಶಶಿಕಲಾ ಜೊಲ್ಲೆ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ವಿಚಾರವಾಗಿ ಆಕ್ರೋಶ ಹೊರಹಾಕಿದರು.

: ಶಶಿಕಲಾ ಜೊಲ್ಲೆ
: ಶಶಿಕಲಾ ಜೊಲ್ಲೆ

By

Published : Nov 18, 2020, 1:23 PM IST

Updated : Nov 18, 2020, 2:21 PM IST

ಚಿಕ್ಕೋಡಿ: ನಮ್ಮ ಕರ್ನಾಟಕವನ್ನು ರಕ್ಷಣೆ ಮಾಡಲು ನಾವೆಲ್ಲ ಸಮರ್ಥರಿದ್ದೇವೆ. ಇದೇನು ಅವರ ಸ್ವತ್ತು ಅಲ್ಲ. ಕರ್ನಾಟಕ ಭಾಷಾವಾರು ಪ್ರಾಂತ್ಯ ಆದಾಗ ವಿಂಗಡಣೆ ಆಗಿದೆ. ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಇರುವಾಗ ಈ ರೀತಿ ಮಾತನಾಡುವುದು ತಪ್ಪು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಶಶಿಕಲಾ ಜೊಲ್ಲೆ

2019 - 20 ನೇ ಸಾಲಿನ ಆರ್‌ಐಡಿಎಫ್ ಟ್ರ್ಯಾಂಚ್ - 25 ಅಡಿ ನಿಪ್ಪಾಣಿಯಲ್ಲಿ ಮಂಜೂರಾದ ಪಶು ಆಸ್ಪತ್ರೆ ಕಟ್ಟಡದ ಶಂಕು ಸ್ಥಾಪನೆ ಸಮಾರಂಭದ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ವಿಚಾರವಾಗಿ ಆಕ್ರೋಶ ಹೊರಹಾಕಿದರು.

ನಾವು ಕರ್ನಾಟಕದ ಕೆಲ ಭಾಗಗಳನ್ನು ಬಿಟ್ಟುಕೊಡಲು ತಯಾರಿಲ್ಲ. ನಮ್ಮ ಅಖಂಡತೆಯನ್ನ ನಮ್ಮದಾಗಿಟ್ಟುಕೊಳ್ಳಲು ನಮ್ಮ ಪ್ರಯತ್ನ ಇದೆ. ಅವರು ಏನೇ ಹೇಳಿದ್ರು ಅವರಿಗೆ ಬಿಟ್ಟಿದ್ದು. ಅವರ ಹೇಳಿಕೆಯಿಂದ ನಮ್ಮ ನಮ್ಮಲ್ಲಿ ಜಗಳವಾಗಬಾರದು. ನಮ್ಮ ಕರ್ನಾಟಕವನ್ನು ರಕ್ಷಣೆ ಮಾಡಲು ನಾವೆಲ್ಲ ಸಮರ್ಥರಿದ್ದೇವೆ ಎಂದರು.

Last Updated : Nov 18, 2020, 2:21 PM IST

For All Latest Updates

TAGGED:

ABOUT THE AUTHOR

...view details