ಚಿಕ್ಕೋಡಿ:ಕೊರೊನಾ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಸರ್ಕಾರವು ಸಾರ್ವಜನಿಕ ಸಭೆ ಸಮಾರಂಭ, ಜಾತ್ರೆ, ಸಂತೆ ಹಾಗೂ ಮದುವೆ ಸಮಾರಂಭಗಳನ್ನು ಮುಂದೂಡಲು ಅಥವಾ ರದ್ದು ಮಾಡಲು ಆದೇಶ ನೀಡಿದೆ.
ಮೂಡಲಗಿ ಪಟ್ಟಣದಲ್ಲಿ ಸಂತೆ ನಡೆಸದಂತೆ ಮೂಡಲಗಿ ದಂಡಾಧಿಕಾರಿಗಳು ಆದೇಶ ನೀಡಿದ್ರೂ, ಸಂತೆ ಜೋರಾಗಿ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಸಂತೆಗೆ, ಮಹಾರಾಷ್ಟ್ರದ ಮಿರಜ್ ಹಾಗೂ ಸಾಂಗ್ಲಿ ಕಡೆಯಿಂದ ವ್ಯಾಪಾರಸ್ಥರು ಬರುವುದರಿಂದ, ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಸುಮ್ಮನೆ ಇದ್ದಾರೆ. ಇದರಿಂದ ಜನರ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲವೆಂದು ಗೋಚರವಾಗ್ತಿದೆ.
ಜೋರಾಗಿ ನಡೆದ ಮೂಡಲಗಿ ಸಂಜೆ ಸಂತೆ ಶನಿವಾರ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ರದ್ದು ಮಾಡಿರುವ ತಾಲೂಕಾ ಆಡಳಿತ, ಶನಿವಾರ ಸಂಜೆ ಸಂತೆ ರದ್ದು ಮಾಡಿ ಆದೇಶ ನೀಡಿತ್ತು. ಆದರೆ ಸಂತೆ ಮಾತ್ರ ರದ್ದಾಗಿಲ್ಲಾ.ಈಗಾಗಲೇ ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಈ ಸಂತೆಯಲ್ಲಿ ಮಹಾರಾಷ್ಟ್ರದ ಗಡಿ ಭಾಗದ ಸಾಂಗ್ಲಿ, ಕೊಲ್ಲಾಪೂರ ಭಾಗದ ಜನರು ಆಗಮಿಸುತ್ತಿದ್ದು ಈ ಸಂತೆಯಲ್ಲಿ ಸಾವಿರಾರು ಜನರು ಕೂಡುವುದರಿಂದ ಕೊರೊನ ಸೋಂಕು ಹರಡುವ ಸಾಧ್ಯತೆಯಿದೆ.
ಈ ಮೊದಲೇ ಸಂತೆ ಬಂದ್ ಮಾಡಬೇಕು ಎಂದು ಆದೇಶ ನೀಡಿದರೂ, ಸರ್ಕಾರದ ಆದೇಶ ಗಾಳಿಗೆ ತೂರಿ ಸಾರ್ವಜನಿಕರು ಸಂತೆ ನಡೆಸಿದ್ದಾರೆ. ಇತ್ತ ಅಧಿಕಾರಿಗಳು ಕೂಡ ಅತ್ತ ಕಡೆ ಗಮನ ಹರಿಸದೇ ಅಸಡ್ಡೆ ತೋರಿದ್ದಾರೆ.