ಬೆಳಗಾವಿ:ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮಹಿಳೆ ಮೇಲೆ ಶೂಟೌಟ್ ನಡೆಸಿದ ಪ್ರಕರಣವನ್ನ ಸಂಕೇಶ್ವರ ಪೊಲೀಸರು ಭೇದಿಸಿದ್ದು, ಗುಂಡು ಹಾರಿಸಿ ಮಹಿಳೆಯನ್ನ ಕೊಂದಿದ್ದ ಆರೋಪಿ ಬಿಜೆಪಿ ಪುರಸಭೆ ಸದಸ್ಯನನ್ನು ಬಂಧಿಸಿದ್ದಾರೆ. ಸಂಕೇಶ್ವರ ವಾರ್ಡ ನಂಬರ್ 14ರ ಬಿಜೆಪಿ ಪುರಸಭೆ ಸದಸ್ಯ ಉಮೇಶ ಕಾಂಬಳೆ ಬಂಧಿತ ಆರೋಪಿ.
ಜ. 16ರಂದು ನಾಡ ಪಿಸ್ತೂಲ್ನಿಂದ ಶೈಲಾ ನಿರಂಜನ ಸುಭೇದಾರ (56) ಎಂಬ ಮಹಿಳೆಗೆ ಎದೆ ಹಾಗೂ ಕೈಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪ್ರಕರಣ ಬೆನ್ನತ್ತಿದ್ದ ಸಂಕೇಶ್ವರ ಠಾಣೆಯ ಪಿಎಸ್ಐ ಗಣಪತಿ ಕೊಂಗನೊಳ್ಳಿ ಹಾಗೂ ಸಿಪಿಐ ರಮೇಶ್ ಛಾಯಾಗೋಳ, ಹವಾಲ್ದಾರ ಭೀಮಪ್ಪ ನಾಗನೂರ, ಬಸವರಾಜ ಕಪರಟ್ಟಿ ಅವರ ತಂಡ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.