ಬೆಳಗಾವಿ: ಬ್ಯಾ.ನಾಥ್ ಪೈ ವ್ಯಾಖ್ಯಾನಮಾಲೆ ಕಾರ್ಯಕ್ರಮಕ್ಕೆ ನಗರ ಪೊಲೀಸರು ಅವಕಾಶ ನೀಡದಿದ್ದಕ್ಕೆ ಶಿವಸೇನೆ ಪಕ್ಷದ ಮುಖಂಡ ಸಂಜಯ್ ರಾವತ್ ಖಾಸಗಿ ಹೋಟೆಲ್ಗೆ ತೆರಳಿದ್ದಾರೆ.
ವಿಮಾನ ನಿಲ್ದಾಣದಿಂದ ಸಂಜಯ್ ರಾವತ್ ಬರುತ್ತಿದ್ದಂತೆ ಎಂಇಎಸ್ ಮತ್ತು ಶಿವಸೇನೆ ಪುಂಡರು 'ನಾಡದ್ರೋಹಿ' ಎಂಬ ಘೋಷಣೆ ಕೂಗಿದ್ದಾರೆ. ನೂರಕ್ಕೂ ಅಧಿಕ ಪೊಲೀಸರ ಬಂದೋಬಸ್ತ್ನಲ್ಲಿದ್ದ ಸಂಸದ ಸಂಜಯ್ ರಾವತ್ ವಿರುದ್ಧ ಮತ್ತು ಬೆಳಗಾವಿ, ಕಾರವಾರ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿಸಲೇಬೇಕೆಂಬ ಘೋಷಣೆಗಳನ್ನು ಹೂಗಿದರು.
ವಿಮಾನ ನಿಲ್ದಾಣದದಿಂದ ನೇರ ಖಾಸಗಿ ಹೋಟಲ್ಗೆ ತೆರಳಿದ ಸಂಜಯ್ ರಾವತ್! ಬೆಳಗಾವಿಯ ಅತ್ಯಂತ ಹಳೆಯ ಸಾರ್ವಜನಿಕ ಗ್ರಂಥಾಲಯದ ಬ್ಯಾ.ನಾಥ್ ಪೈ ವ್ಯಾಖ್ಯಾನಮಾಲೆ ಕಾರ್ಯಕ್ರಮ ಸಂಜೆ 4:30ಕ್ಕೆ ನಡೆಯಬೇಕಿತ್ತು. ನಗರದ ಗೋಗಟೆ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ಬೆಳಗಾವಿ ಪೊಲೀಸರು ಅನುಮತಿ ನೀಡಿದ್ದು, ಸಂಜಯ್ ರಾವತ್‌ಗೆ ನಗರ ಪ್ರವೇಶಕ್ಕೂ ಅನುಮತಿ ನೀಡಿರಲಿಲ್ಲ.
ಇದನ್ನು ಓದಿ:ಬೆಳಗಾವಿಗೆ ಬಂದ ಶಿವಸೇನಾ ಮುಖಂಡ ಸಂಜಯ್ ರಾವತ್... ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು
ವಿವಾದಾತ್ಮಕ ಹೇಳಿಕೆಗಳಿಂದಲೇ ಸಂಜಯ್ ರಾವತ್ ಸದಾ ಸುದ್ದಿಯಲ್ಲಿದ್ದು, ಬೆಳಗಾವಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವ ಸಾಧ್ಯತೆ ಇರುವ ಕಾರಣಕ್ಕೆ ಸಂಜಯ್ ರಾವತ್‌ಗೆ ನಗರ ಪ್ರವೇಶಕ್ಕೆ ಅನುಮತಿ ನೀಡದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಪಟ್ಟು ಹಿಡಿದ್ದರು.