ಕರ್ನಾಟಕ

karnataka

ETV Bharat / state

ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಕೆಎಎಸ್ ಅಧಿಕಾರಿ ಪುತ್ರಿಗೆ ಪ್ರತ್ಯೇಕ ಕೊಠಡಿ ನೀಡಿದ ಆರೋಪ! - ಸೈನಿಕ ಶಾಲೆ ಪ್ರವೇಶ ಪರೀಕ್ಷೆ

ಸೈನಿಕ ಶಾಲೆ ಪ್ರವೇಶ ಪರೀಕ್ಷೆ ಬರೆಯಲು ಕೆಎಎಸ್​ ಅಧಿಕಾರಿ ಪುತ್ರಿ ಮತ್ತು ಸಂಬಂಧಿಯ ಪುತ್ರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನುಳಿದ ಅಭ್ಯರ್ಥಿಗಳ ಪೋಷಕರು ಈ ಸಂಬಂಧ ಪ್ರತಿಭಟನೆ ನಡೆಸಿ, ಕೆಎಎಸ್ ಅಧಿಕಾರಿ ಶಶಿಧರ ಕುರೇರ, ಶಾಲಾ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.

Military School Entrance Examination
ಕೆಎಎಸ್ ಅಧಿಕಾರಿ ಪುತ್ರಿಗೆ ಪ್ರತ್ಯೇಕ ಕೊಠಡಿ !

By

Published : Jan 9, 2022, 7:26 PM IST

Updated : Jan 9, 2022, 8:01 PM IST

ಬೆಳಗಾವಿ:ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷೆಯ ಕೇಂದ್ರದಲ್ಲಿ ಗೋಲ್‌ಮಾಲ್ ಮಾಡಿರುವ ಆರೋಪ ಕೆಎಎಸ್ ಅಧಿಕಾರಿ ವಿರುದ್ಧ ಕೇಳಿ ಬಂದಿದೆ. ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.

ಕೋವಿಡ್ ಪಾಸಿಟಿವ್ ಇದ್ದ ಮೂವರು ಮಕ್ಕಳ ಜೊತೆಗೆ ಕಾಡಾ ಆಡಳಿತಾಧಿಕಾರಿ ಶಶಿಧರ ಕುರೇರ ಪುತ್ರಿ ಹಾಗೂ ಅಧಿಕಾರಿಯ ಸಂಬಂಧಿಯ ಪುತ್ರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಸೋಂಕಿತರ ಕೊಠಡಿಯಲ್ಲಿದ್ದ ಮಕ್ಕಳಿಗೆ ಅವಧಿಗೂ ಮುನ್ನವೇ ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ಶೀಟ್ ನೀಡಲಾಗಿದೆ ಎಂದು ಇನ್ನುಳಿದ ಅಭ್ಯರ್ಥಿಗಳ ಪೋಷಕರು ಆರೋಪಿಸಿ ಪ್ರತಿಭಟನೆ ನಡೆಸಿದರು. ಕೆಎಎಸ್ ಅಧಿಕಾರಿ ಶಶಿಧರ ಕುರೇರ, ಶಾಲಾ ಪ್ರಾಂಶುಪಾಲರನ್ನು ಪೋಷಕರು ತರಾಟೆಗೆ ತಗೆದುಕೊಂಡರು.

ಕೆಎಎಸ್ ಅಧಿಕಾರಿ ಪುತ್ರಿಗೆ ಪ್ರತ್ಯೇಕ ಕೊಠಡಿ ನೀಡಿದ ಆರೋಪ

ಆರೋಪ ಅಲ್ಲಗಳೆದ ಕುರೇರ:

ಪೋಷಕರ ಆರೋಪವನ್ನು ಕೆಎಎಸ್ ಅಧಿಕಾರಿ ಶಶಿಧರ ಕುರೇರ ಅಲ್ಲಗಳೆದಿದ್ದಾರೆ. ಮಗಳಿಗೆ ಕೋವಿಡ್ ಗುಣಲಕ್ಷಣವಿತ್ತು. ಹೀಗಾಗಿ ಒಂದು ಗಂಟೆ ಮುಂಚೆ ಬಂದು ಪ್ರತ್ಯೇಕ ಕೊಠಡಿ ವ್ಯವಸ್ಥೆ ಬಗ್ಗೆ ವಿಚಾರಿಸಿದ್ದೆ. ಕೋವಿಡ್ ಗುಣಲಕ್ಷಣ ಇರುವವರಿಗಿದ್ದ ಪ್ರತ್ಯೇಕ ಕೊಠಡಿಯಲ್ಲಿ ನನ್ನ ಪುತ್ರಿಗೂ ವ್ಯವಸ್ಥೆ ಮಾಡಲಾಗಿತ್ತು. ಅದನ್ನ ಪಾಲಕರೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಕೆಎಎಸ್ ಅಧಿಕಾರಿ ಸಮಜಾಯಿಷಿ ನೀಡಿದರು. ಆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಪೋಷಕರು ಒತ್ತಾಯಿಸಿದರು.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಚಾಲನೆ ಬಳಿಕ ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಡಿಕೆಶಿ ವಾಗ್ದಾಳಿ

ಕುರೇರ ಪುತ್ರಿ ಅನರ್ಹ:

ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷಾ ಕೇಂದ್ರದಲ್ಲಿ ಗೋಲ್‌ಮಾಲ್ ಆರೋಪ ಕೇಳಿ ಬರುತ್ತಿದ್ದಂತೆ ಪರೀಕ್ಷಾ ಕೇಂದ್ರಕ್ಕೆ ಬಿಇಒ ವಿ.ಜೆ. ಭಜಂತ್ರಿ ಭೇಟಿ ನೀಡಿದರು. ಪ್ರತಿಭಟನೆ ನಡೆಸುತ್ತಿದ್ದ ಪೋಷಕರ ಜೊತೆಗೆ ಚರ್ಚೆ ನಡೆಸಿದರು. ಬಳಿಕ ಪರೀಕ್ಷಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಶಶಿಧರ ಕುರೇರ ಪುತ್ರಿ ಹಾಗೂ ಸಂಬಂಧಿಯ ಪುತ್ರಿಯನ್ನು ಪರೀಕ್ಷೆಯಿಂದ ಅನರ್ಹಗೊಳಿಸಿರುವುದನ್ನು ಬಿಇಒ ವಿ.ಜೆ. ಭಜಂತ್ರಿ ಘೋಷಿಸಿದರು.

Last Updated : Jan 9, 2022, 8:01 PM IST

ABOUT THE AUTHOR

...view details