ಚಿಕ್ಕೋಡಿ: ತನ್ನದೆಯಾದ ಅಭಿಮಾನಿ ಬಳಗ ಹೊಂದಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದರು. ಗೋಕಾಕ್ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದ ಬಳಿಕ ಈ ಘಟನೆ ನಡೆಯಿತು.
ಸಾಹುಕಾರ ಸತೀಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು...! - ಚಿಕ್ಕೋಡಿ ಸುದ್ದಿ
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ಘಟನೆ ನಡೆಯಿತು. ಇನ್ನು ಮಾಜಿ ಸಚಿವರು ಸಂತೋಷದಿಂದಲೇ ಸೆಲ್ಫಿ ನೀಡಿದರು.
ಸಾವುಕಾರ್ ಸತೀಶ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು...!
ಪ್ರತಿ ಕಾರ್ಯಕ್ರಮದಲ್ಲೂ ಅಭಿಮಾನಿಗಳು ಮುಗಿಬಿದ್ದು ಸತೀಶ್ ಜಾರಕಿಹೊಳಿ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳವುದು ಸಾಮಾನ್ಯವಾಗಿದೆ. ಹಾಗೆ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಬೇಸರ ಉಂಟು ಮಾಡದೇ ಸತೀಶ್ ಇಂದು ಕೂಡ ಖುಷಿ ಖುಷಿಯಾಗಿ ಸೆಲ್ಫಿ ನೀಡಿದರು.
ಸತೀಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಫುಲ್ ಖುಷಿಯಾದ್ರು.