ಚಿಕ್ಕೋಡಿ: ತಮ್ಮ ಕೆಲಸದ ಸಲುವಾಗಿ ತಾಲೂಕಿನ ಸದಲಗಾ ಪಟ್ಟಣದ ಸಬ್ ರಜಿಸ್ಟ್ರಾರ್ ಕಚೇರಿಗೆ ಬಂದು ಹೋದಂತಹ ಮೂವರಿಗೆ ಸೊಂಕು ದೃಢಪಟ್ಟಿರುವ ಹಿನ್ನೆಲೆ, ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಸದಲಗಾ ಸಬ್ ರಜಿಸ್ಟ್ರಾರ್ ಕಚೇರಿ ಸೀಲ್ ಡೌನ್ - Sadalaga sub register office
ತಮ್ಮ ಜಮೀನು ಕೆಲಸದ ಸಲುವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಸಬ್ ರಜಿಸ್ಟ್ರಾರ್ ಕಚೇರಿಗೆ ಬಂದು ಅಲ್ಲಿಯೇ ಕೆಲ ಹೊತ್ತು ಇದ್ದು ಹೋದ ಮೂವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
Sub register office seal down
ಸದಲಗಾ ಪಟ್ಟಣದ ಪಕ್ಕದಲ್ಲಿರುವ ಚಂದೂರ ಗ್ರಾಮದ ಮೂವರು ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ರಜಿಸ್ಟ್ರಾರ್ ಆಫೀಸ್‌ಗೆ ಆಗಮಿಸಿ, ಕೆಲ ಹೊತ್ತು ಕಚೇರಿಯಲ್ಲಿ ಇದ್ದು ಹೋಗಿದ್ದಾರೆ. ಸದ್ಯ ಅವರಿಗೆ ಕೊರೊನಾ ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಬ್ ರಜಿಸ್ಟ್ರಾರ್ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.