ಕರ್ನಾಟಕ

karnataka

ETV Bharat / state

ಚಿಕ್ಕೋಡಿ : ಪರವಾನಿಗೆ ಇಲ್ಲದೆ ಜಮೀನಿನಲ್ಲಿ‌ ಗಾಂಜಾ ಬೆಳೆದಿದ್ದ ಆರೋಪಿ ಬಂಧನ - Chikkodi crime latest news

ಲಾಭಕ್ಕಾಗಿ ಜಮೀನಿನಲ್ಲಿ ಪರವಾನಿಗೆ ಇಲ್ಲದೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಸದಲಗಾ ಪೊಲೀಸರು ಬಂಧಿಸಿದ್ದಾರೆ.

Accused
Accused

By

Published : Sep 9, 2020, 7:33 PM IST

Updated : Sep 9, 2020, 7:42 PM IST

ಚಿಕ್ಕೋಡಿ :ಪರವಾನಿಗೆ ಇಲ್ಲದೆ ಜಮೀನಿನಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುವ ತಯಾರಿಯಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಶರದ ಧನಪಾಲ ಧನಪ್ಪಗೋಳ (42) ಬಂಧಿತ ಆರೋಪಿ. ಈತ ತನ್ನ‌ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಅದನ್ನು‌ ಮಾರಾಟ ಮಾಡಲು ಮುಂದಾಗಿದ್ದನು.

ವಿಷಯ ತಿಳಿದ ಸದಲಗಾ ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ಆತನಿಂದ 12,552 ಮೌಲ್ಯದ 4 ಕೆ.ಜಿ 174 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 9, 2020, 7:42 PM IST

ABOUT THE AUTHOR

...view details