ಬೆಳಗಾವಿ:ಕುಂದಾನಗರಿ ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏಳಕ್ಕೇರಿದೆ. ಹೀಗಿದ್ದರೂ ಸಾಮಾಜಿಕ ಅಂತರ, ಲಾಕ್‌ಡೌನ್ ಆದೇಶಕ್ಕೆ ಕ್ಯಾರೆ ಜನ ಎನ್ನುತ್ತಿಲ್ಲ.
ಸೋಂಕಿತರ ಸಂಖ್ಯೆ ಏಳಕ್ಕೇರಿದರೂ ಕ್ಯಾರೆ ಎನ್ನದ ಬೆಳಗಾವಿ ಜನ.. ತರಕಾರಿ ಮಾರುಕಟ್ಟೆಯಲ್ಲಿ ಜನವೋ ಜನ - rush at belgavi apmc market
ಮಾರುಕಟ್ಟೆಯಲ್ಲಿ ಜನಜಂಗುಳಿ ತಡೆಯಲು ಜಿಲ್ಲಾಡಳಿತ ನಾಲ್ಕು ಕಡೆ ಮಾರುಕಟ್ಟೆ ವ್ಯವಸ್ಥೆ ಮಾಡಿದೆ. ಆದ್ರೆ ಎಲ್ಲ ಕಡೆಯೂ ತರಕಾರಿ ಖರೀದಿಗೆ ಹಾಗೂ ಮಾರಾಟ ಮಾಡಲು ಜನಸಾಗರವೇ ಹರಿದು ಬರುತ್ತಿದೆ. ಯಾರೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ, ಮಾಸ್ಕ್ ಧರಿಸಿಲ್ಲ.
![ಸೋಂಕಿತರ ಸಂಖ್ಯೆ ಏಳಕ್ಕೇರಿದರೂ ಕ್ಯಾರೆ ಎನ್ನದ ಬೆಳಗಾವಿ ಜನ.. ತರಕಾರಿ ಮಾರುಕಟ್ಟೆಯಲ್ಲಿ ಜನವೋ ಜನ](https://etvbharatimages.akamaized.net/etvbharat/prod-images/768-512-6719797-1069-6719797-1586412270318.jpg)
market
ಬೆಳಗಾವಿಯ ಮಾಲಿನಿ ಸಿಟಿಯ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿದೆ. ಎಪಿಎಂಸಿಯಲ್ಲಿದ್ದ ಹೋಲ್ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ತಡೆಯಲು ಜಿಲ್ಲಾಡಳಿತ ನಾಲ್ಕು ಕಡೆ ಮಾರುಕಟ್ಟೆ ವ್ಯವಸ್ಥೆ ಮಾಡಿದೆ. ಆದ್ರೆ ಎಲ್ಲ ಕಡೆಯೂ ತರಕಾರಿ ಖರೀದಿಗೆ ಹಾಗೂ ಮಾರಾಟ ಮಾಡಲು ಜನಸಾಗರವೇ ಹರಿದು ಬರುತ್ತಿದೆ.
ತರಕಾರಿ ಮಾರುಕಟ್ಟೆಯಲ್ಲಿ ಜನವೋ ಜನ
ಜನ ಗುಂಪುಗುಂಪಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಯಾರೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ, ಮಾಸ್ಕ್ ಧರಿಸಿಲ್ಲ. ಜನಜಂಗುಳಿಗೆ ಬೆಚ್ಚಿ ಮಾರುಕಟ್ಟೆಯ ಒಳಗೆ ಹೋಗಲು ಪೊಲೀಸರೂ ಭಯ ಪಡುತ್ತಿದ್ದಾರೆ. ಹೀಗಾಗಿ ತರಕಾರಿ ಮಾರುಕಟ್ಟೆಯ ಹೊರಗೆ ಪೊಲೀಸರು ಸಾಲಾಗಿ ನಿಂತಿದ್ದಾರೆ.