ಕರ್ನಾಟಕ

karnataka

ETV Bharat / state

ಈ ಬೆಳಗಾವಿ ಜನಕ್ಕೇ ಎಷ್ಟ್‌ ಬಡ್ಕೊಂಡ್ರೂ ಅಷ್ಟ್‌ರಾಗ್‌ ಐತಿ.. ಈ ಮಾರ್ಕೆಟ್‌ನ ಸ್ಥಿತಿ ನೋಡ್ರೀ.. - rush at belagavi market

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಾಗೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ವ್ಯಾಪಾರ, ವಹಿವಾಟು‌ ನಡೆಸಲಾಗುತ್ತಿದೆ.

blgv
blgv

By

Published : Apr 6, 2020, 11:23 AM IST

ಬೆಳಗಾವಿ :ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎರಡೇ ದಿನಗಳಲ್ಲಿ ‌ಕೊರೊನಾ ಸೋಂಕಿತರ ಸಂಖ್ಯೆ ‌7ಕ್ಕೇರಿದರೂ ಬೆಳಗಾವಿ ‌ಜನ ಕ್ಯಾರೇ ಎನ್ನುತ್ತಿಲ್ಲ. ಮಾರುಕಟ್ಟೆಗಳಲ್ಲಿ ಗುಂಪು ಗುಂಪಾಗಿ ‌ಜನ ಸೇರಿರುವ ಘಟನೆ ‌ಗೋಕಾ‌ಕ್‌ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ‌ ನಡೆದಿದೆ. ಲಾಕ್​ಡೌನ್ ಮಧ್ಯೆಯೂ ಕೊಣ್ಣೂರು ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದರೂ ಸ್ಥಳಕ್ಕೆ ಪುರಸಭೆ, ಪೊಲೀಸ್ ಸಿಬ್ಬಂದಿ‌ ಬರುತ್ತಿಲ್ಲ.

ಮಾರುಕಟ್ಟೆಯಲ್ಲಿ ಜನಜಂಗುಳಿ..

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಾಗೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ವ್ಯಾಪಾರ, ವಹಿವಾಟು‌ ನಡೆಸಲಾಗುತ್ತಿದೆ. ಮಾಸ್ಕ್‌ ಧರಿಸದೇ ಜನ ಖರೀದಿಯಲ್ಲಿ ನಿರತರಾಗಿದ್ದಾರೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಆದೇಶ ಧಿಕ್ಕರಿಸಿ ಸಂತೆ ನಡೆಯುತ್ತಿದೆ.

ABOUT THE AUTHOR

...view details