ಚಿಕ್ಕೋಡಿ :ತಮ್ಮ ಮನೆತನದ ಪರಿಸ್ಥಿತಿಯ ಅರಿವು, ಮನಸಿಟ್ಟು ಓದುವ ಹವ್ಯಾಸ ಮತ್ತು ಗುರಿ ಮುಟ್ಟುವ ಛಲ. ಈ ಮೂರು ತತ್ವ ಮನದಟ್ಟಾಗಿಸಿದ್ರೆ ಪ್ರತಿಯೊಬ್ಬರೂ ಭವಿಷ್ಯದಲ್ಲಿ ಇಟ್ಟುಕೊಂಡ ಗುರಿ ತಲುಪಲು ಸಾಧ್ಯ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದ ಮಾಧುರಿ ರೊಡ್ಡ ನಾಲ್ಕು ಚಿನ್ನದ ಪದಕ ಪಡೆದು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ತಂದೆ ಮಹಾವೀರ, ತಾಯಿ ವಿಜಯಲಕ್ಷ್ಮಿ. ನನ್ನ ತಂದೆ-ತಾಯಿ ಪ್ರೋತ್ಸಾಹದಿಂದಲೇ ನಾನು ಬಂಗಾರದ ಪದಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದಳು.
4 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ಮಾಧುರಿ ರೊಡ್ಡ.. ಹಳ್ಳಿಯಲ್ಲಿ ಓದಿ ಇತರರಿಗೆ ಸ್ಫೂರ್ತಿಯಾದ ಯುವತಿ!! - Belgaum District News
ಎಸ್ಸೆಸ್ಸೆಲ್ಸಿಯಲ್ಲಿ ಶೇ.96.64 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಳು. ನಂತರ ಹುಬ್ಬಳ್ಳಿಯ ಶಾಂತಿನಿಕೇತನ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪಿಯುಸಿ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಕೆಎಲ್ಇ ಸಂಸ್ಥೆಯ ಬಿ ಎಂ ಕಂಕಣವಾಡಿ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಬಿಎಎಂಎಸ್ಗೆ ಪ್ರವೇಶ ಪಡೆದಳು..
ಪೋಷಕರೊಂದಿಗೆ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ
ಎಸ್ಸೆಸ್ಸೆಲ್ಸಿಯಲ್ಲಿ ಶೇ.96.64 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಳು. ನಂತರ ಹುಬ್ಬಳ್ಳಿಯ ಶಾಂತಿನಿಕೇತನ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪಿಯುಸಿ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಕೆಎಲ್ಇ ಸಂಸ್ಥೆಯ ಬಿ ಎಂ ಕಂಕಣವಾಡಿ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಬಿಎಎಂಎಸ್ಗೆ ಪ್ರವೇಶ ಪಡೆದಳು. ಅಲ್ಲಿ ನಾಲ್ಕು ವರ್ಷಗಳಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾಳೆ.