ಅಥಣಿ:ಜಾತ್ರೆಯ ತುಂಬ ಕಳೆಗಟ್ಟಿದ ಗ್ರಾಮೀಣ ಕ್ರೀಡೆಗಳ ಉತ್ಸಾಹ ಕಂಡು ಬಂದಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಕಾಶಿ ವಿಶ್ವೇಶ್ವರ ಜಾತ್ರೆಯಲ್ಲಿ.
ಕಾಶಿ ವಿಶ್ವೇಶ್ವರ ಜಾತ್ರೆಯಲ್ಲಿ ಕಳೆಗಟ್ಟಿದ ಗ್ರಾಮೀಣ ಕ್ರೀಡೆ - ಬೆಳಗಾವಿ ಜಿಲ್ಲೆಯ ಕಾಶಿ ವಿಶ್ವೇಶ್ವರ ಜಾತ್ರೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಪ್ತಸಾಗರದ ಕಾಶಿ ವಿಶ್ವೇಶ್ವರ ಜಾತ್ರೆಯ ತುಂಬಾ ಕಳೆಗಟ್ಟಿದ ಗ್ರಾಮೀಣ ಕ್ರೀಡೆಗಳ ಉತ್ಸಾಹ ಕಂಡು ಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದವಿದು.
![ಕಾಶಿ ವಿಶ್ವೇಶ್ವರ ಜಾತ್ರೆಯಲ್ಲಿ ಕಳೆಗಟ್ಟಿದ ಗ್ರಾಮೀಣ ಕ್ರೀಡೆ Rural sport at the Kashi Vishweshwara Fair](https://etvbharatimages.akamaized.net/etvbharat/prod-images/768-512-5748838-thumbnail-3x2-ath.jpg)
ಸಾವಿರಾರು ಭಕ್ತರು ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಬೇರೆಬೇರೆ ರಾಜ್ಯದ ಕುಸ್ತಿಪಟುಗಳು ಭಾಗವಹಿಸಿ ಕ್ರೀಡೆಗೆ ಮೆರಗು ತಂದರು. ಈ ಸಂದರ್ಭದಲ್ಲಿ ನೆರೆಹಾವಳಿಗೆ ತುತ್ತಾಗಿದ್ದ ಕೃಷ್ಣಾ ತೀರದ ಎಲ್ಲ ಗ್ರಾಮಸ್ಥರಿಗೆ ಸಕಲ ಸೌಲಭ್ಯ ಕಲ್ಪಿಸಿದ ಡಾ.ಪದ್ಮಜೀತ ಅಪ್ಪಾಸಾಹೇಬ್ ನಾಡಗೌಡ ಪಾಟೀಲ್ ಹಾಗೂ ಅಪ್ಪಾಸಾಹೇಬ್ ನಾಡ ಗೌಡ ಪಾಟೀಲ್ ಅವರನ್ನು ಜಾತ್ರೆ ಕಮಿಟಿ ವತಿಯಿಂದ ಸತ್ಕರಿಸಲಾಯಿತು.
ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಆದರೆ, ಗ್ರಾಮದ ಜಾತ್ರೆ ನಿಮಿತ್ತ ಎಲ್ಲ ಆಟಗಳನ್ನ ಆಯೋಜಿಸಲಾಗಿದ್ದು, ಸಂತಸ ತಂದಿದೆ ಎಂದು ಡಾ.ಪದ್ಮಜೀತ ನಾಡಗೌಡ ಪಾಟೀಲ್ ಹೇಳಿದರು.