ಬೆಳಗಾವಿ:ಪೀರನವಾಡಿಯಲ್ಲಿ ಲಾಠಿ ಪ್ರಹಾರ ನಡೆದ ಸ್ಥಳಕ್ಕೆ ಹೆಚ್ಚಿನ ಭದ್ರತೆಗಾಗಿ ನಗರದ ಚೆನ್ನಮ್ಮ ಪಡೆ ನಿಯೋಜನೆ ಮಾಡಲಾಗಿದ್ದು, ಪೊಲೀಸರು ನಗರದಲ್ಲಿ ರೌಂಡ್ಸ್ ನಡೆಸಿ ಗುಂಪು ಗುಂಪಾಗಿ ನಿಲ್ಲದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಪೀರನವಾಡಿ ಗ್ರಾಮದಲ್ಲಿ ಪೊಲೀಸರಿಂದ ರೌಂಡ್ಸ್: ಗುಂಪು ಗುಂಪಾಗಿ ನಿಲ್ಲದಂತೆ ಎಚ್ಚರಿಕೆ
ರಾಯಣ್ಣ ಪ್ರತಿಮೆಗೆ ಮರಾಠ ಸುಮುದಾಯದ ಮಹಿಳೆಯರ ವಿರೋಧ ಹಿನ್ನೆಲೆ ಚೆನ್ನಮ್ಮ ಪಡೆಯನ್ನು ಕರೆಸಿಕೊಳ್ಳಲಾಗಿದೆ.
ಕನ್ನಡಪರ ಸಂಘಟನೆಗಳಿಂದ ಮಧ್ಯರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ ಪೀರನವಾಡಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಶಿವಸೇನೆ ಸೇರಿದಂತೆ ಎಂಇಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿರೋ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚೆನ್ನಮ್ಮ ಪಡೆ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ರಾಯಣ್ಣ ಪ್ರತಿಮೆಗೆ ಮರಾಠ ಸುಮುದಾಯದ ಮಹಿಳೆಯರ ವಿರೋಧ ಹಿನ್ನೆಲೆ ಚೆನ್ನಮ್ಮ ಪಡೆಯನ್ನು ಕರೆಸಿಕೊಳ್ಳಲಾಗಿದೆ. ಸದ್ಯಕ್ಕೆ ಪೀರನವಾಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಯಾವುದೇ ಸಮುಯದಲ್ಲಾದರೂ ವಾತಾವರಣ ಹದೆಗೆಡಬಹುದೆಂಬ ಕಾರಣಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ರೌಂಡ್ಸ್ ನಡೆಸುವ ಮೂಲಕ ಗುಂಪು ಗುಂಪಾಗಿ ನಿಲ್ಲದಂತೆ ಗ್ರಾಮಸ್ಥರಿಗೆ ಸೂಚನೆ ನೀಡುತ್ತಿದ್ದಾರೆ.