ಕರ್ನಾಟಕ

karnataka

ETV Bharat / state

ಬೆಳಗಾವಿ: ಚಿನ್ನ, ಬೆಳ್ಳಿ ಸಮೇತ ದೇವಸ್ಥಾನದಲ್ಲಿದ್ದ ಹುಂಡಿಯನ್ನೇ ಕದ್ದೊಯ್ದ ಕಳ್ಳರು

ಕಲಾರಕೊಪ್ಪ ಗ್ರಾಮದ ಬಸವೇಶ್ವರ, ಲಕ್ಷ್ಮಿ- ಸರಸ್ವತಿ ದೇವಸ್ಥಾನಗಳನ್ನು ದರೋಡೆ ಮಾಡಲಾಗಿದೆ. ಬಸವೇಶ್ವರ ದೇಗುಲದಲ್ಲಿದ್ದ 10 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಜೊತೆಗೆ ಹುಂಡಿಯ ಸಮೇತ ಕಳ್ಳರು ಪರಾರಿಯಾಗಿದ್ದಾರೆ. ಹುಂಡಿಯಲ್ಲಿನ ಕಾಣಿಕೆ ಹಣ ಒಯ್ಯದೆ ಕಳ್ಳರು ಹುಂಡಿಯನ್ನೇ ಹೊತ್ತೊಯ್ದಿದ್ದಾರೆ.

Temple
ದೇವಸ್ಥಾನ

By

Published : Jan 9, 2022, 6:24 PM IST

ಬೆಳಗಾವಿ: ವೀಕೆಂಡ್​ ಕರ್ಪ್ಯೂ ಜಾರಿ ಮಧ್ಯೆಯೂ ನಗರದಲ್ಲಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿರುವ ಕಳ್ಳರು ಕೈಚಳಕ ತೋರಿಸಿದ್ದಾರೆ. ದೇವಸ್ಥಾನದಲ್ಲಿದ್ದ ಚಿನ್ನ, ಬೆಳ್ಳಿ ಜೊತೆಗೆ ಹಣದ ಹುಂಡಿಯನ್ನೇ ಕದ್ದು ಕಳ್ಳರು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

ವೀಕೆಂಡ್ ಕರ್ಫ್ಯೂ ಹಿನ್ನಲೆ ಕಳ್ಳರು ಮನೆಗಳನ್ನು ಬಿಟ್ಟು ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಈ ದುಷ್ಕೃತ್ಯ ಎಸಗಿದ್ದಾರೆ.

ಕಲಾರಕೊಪ್ಪ ಗ್ರಾಮದ ಬಸವೇಶ್ವರ, ಲಕ್ಷ್ಮಿ-ಸರಸ್ವತಿ ದೇವಸ್ಥಾನಗಳನ್ನು ದರೋಡೆ ಮಾಡಲಾಗಿದೆ. ಬಸವೇಶ್ವರ ದೇಗುಲದಲ್ಲಿದ್ದ 10 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಜೊತೆಗೆ ಹುಂಡಿಯ ಸಮೇತ ಕಳ್ಳರು ಪರಾರಿಯಾಗಿದ್ದಾರೆ. ಹುಂಡಿಯಲ್ಲಿನ ಕಾಣಿಕೆ ಹಣ ಒಯ್ಯದೆ ಕಳ್ಳರು ಹುಂಡಿಯನ್ನೇ ಹೊತ್ತೊಯ್ದಿದ್ದಾರೆ.

ಹುಂಡಿಯಲ್ಲಿ ಅಂದಾಜು 2 ಲಕ್ಷ ಕಾಣಿಕೆ ಹಣ ಇದ್ದ ಬಗ್ಗೆ ಗ್ರಾಮಸ್ಥರು ಅಂದಾಜಿಸಿದ್ದಾರೆ. ಬಳಿಕ ಅದೇ ಗ್ರಾಮದ ಲಕ್ಷ್ಮಿ-ಸರಸ್ವತಿ ದೇವಸ್ಥಾನ ಕೀಲಿ ಮುರಿದು ದೇವಸ್ಥಾನದಲ್ಲಿದ್ದ ಚಿನ್ನ, ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ದೇವಸ್ಥಾನಗಳ ಕಳ್ಳತನದಿಂದ ಕಲಾರಕೊಪ್ಪ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು- ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 19ರಂದು ತಮಿಳುನಾಡು ಗಡಿ ಬಂದ್ : ವಾಟಾಳ್

For All Latest Updates

TAGGED:

ABOUT THE AUTHOR

...view details