ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನಿಂದ ದರೋಡೆ ಮಾಡಿ ಲಾರಿಯನ್ನು ಕದ್ದೊಯ್ದ ಮೂವರನ್ನು ನಿಪ್ಪಾಣಿ ಗ್ರಾಮೀಣ ಠಾಣೆಯ ಪೊಲೀಸರು ಮಂಗಳವಾರ ವಿಜಯಪುರದಲ್ಲಿ ಬಂಧಿಸಿದ್ದಾರೆ.
ನಿಪ್ಪಾಣಿಯಲ್ಲಿ ಮೂವರು ದರೋಡೆಕೋರರ ಬಂಧನ - Chikkodi
ದರೋಡೆ ಮಾಡಿ ಲಾರಿ ಕದ್ದೊಯ್ದ ಮೂವರು ಆರೋಪಿಗಳನ್ನು ವಿಜಯಪುರದ ತೋರವಿ ಗ್ರಾಮದಲ್ಲಿ ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ.
![ನಿಪ್ಪಾಣಿಯಲ್ಲಿ ಮೂವರು ದರೋಡೆಕೋರರ ಬಂಧನ robbers arrested](https://etvbharatimages.akamaized.net/etvbharat/prod-images/768-512-11480025-thumbnail-3x2-net.jpg)
ಮೂವರು ದರೋಡೆಕೋರರ ಬಂಧನ
ವಿಜಯಪುರದ ಕುಮಟಗಿಯ ಯುವರಾಜ ಉಮಲು ರಾಠೋಡ (30), ಸುರೇಶ ಉಮಲು ರಾಠೋಡ (34) ಮತ್ತು ಮುತ್ತು ಉಮಲು ರಾಠೋಡ (32) ಬಂಧಿತರು.
ಬಂಧಿತರಿಂದ ದರೋಡೆ ಮಾಡಿದ್ದ 14 ಲಕ್ಷ ಮೌಲ್ಯದ ಲಾರಿ, 3 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ವಾಹನ ಮತ್ತು 3 ಸಾವಿರ ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.