ಕರ್ನಾಟಕ

karnataka

ETV Bharat / state

ಅಥಣಿಯಲ್ಲಿ ಮಳೆಯಿಂದಾಗಿ ಕೊಚ್ಚಿ ಹೋದ ರಸ್ತೆಗಳು: ಬಸ್​ ಸಂಚಾರ ಸ್ಥಗಿತ - belagam rain latest news

ಮಳೆಯಿಂದಾಗಿ ರಸ್ತೆಗಳು ಕೊಚ್ಚಿಹೋಗಿದ್ದು, ಅಥಣಿ ತಾಲೂಕಿನಲ್ಲಿ ಶಾಲೆಗೆ ಹೋಗುವ ಮಕ್ಕಳು ಕನಿಷ್ಠ 6 ಕಿಲೋಮೀಟರ್ ನಡೆಯುವ ಪರಿಸ್ಥಿತಿ ಎದುರಾಗಿದೆ.

ಭಾರೀ ಮಳೆಯಿಂದಾಗಿ ಕೊಚ್ಚಿ ಹೋದ ರಸ್ತೆಗಳು

By

Published : Oct 16, 2019, 1:21 PM IST

Updated : Oct 16, 2019, 1:36 PM IST

ಅಥಣಿ:ತಾಲೂಕಿನಲ್ಲಿ ಸುರಿದ ಮಳೆ ಪರಿಣಾಮವಾಗಿ ಶಿರಹಟ್ಟಿ ಗ್ರಾಮದಿಂದ ಪುನರ್ವಸತಿ ಸ್ಥಳದ ನಡುವಿನ ರಸ್ತೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡು 5 ದಿನಗಳೇ ಕಳೆದಿವೆ.

ಭಾರಿ ಮಳೆಯಿಂದಾಗಿ ಕೊಚ್ಚಿ ಹೋದ ರಸ್ತೆಗಳು

ಅಥಣಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೃಷ್ಣಾ ನದಿ ಪ್ರವಾಹದಿಂದ ನೆರೆ ಸಂತ್ರಸ್ತರ ಬದುಕು ದುಸ್ತರವಾಗಿದೆ. ಅದರಲ್ಲೂ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮರ ಜನರು ಕೃಷ್ಣಾ ನದಿ ಪ್ರವಾಹದಿಂದ ರೋಸಿ ಹೋಗಿದ್ದಾರೆ.

ಶಿರಹಟ್ಟಿಯಿಂದ ಸ್ಥಳಾಂತರಗೊಂಡಿರುವ ಶಿರಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಅಥಣಿ ತಾಲೂಕಿನಲ್ಲಿ ನಾಲ್ಕು ದಿನಗಳ ಹಿಂದೆ ಮಳೆ ಸುರಿದ ಪರಿಣಾಮ ಮಡ್ಡಿ ಹಳ್ಳದ ನೀರಿನ ರಭಸಕ್ಕೆ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ.

ಸುಮಾರು 6 ಕಿಲೋಮೀಟರ್ ದೂರದಿಂದ ಜನರು ಹಾಗೂ ಶಾಲಾ ಕಾಲೇಜು ಮಕ್ಕಳು ಬಸ್ಸಿಗಾಗಿ ನಡೆದುಕೊಂಡು ಬರುವ ಸನ್ನಿವೇಶ ಎದುರಾಗಿದೆ. ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ಜನರು ರಸ್ತೆ ರಿಪೇರಿ ಮಾಡಿ ಎಂದು ಮನವಿ ಮಾಡಿದರೂ ಕೂಡ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

Last Updated : Oct 16, 2019, 1:36 PM IST

ABOUT THE AUTHOR

...view details