ಕರ್ನಾಟಕ

karnataka

ETV Bharat / state

ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ಹಣ ಸಂಗ್ರಹಿಸಿ ರಸ್ತೆ ನಿರ್ಮಾಣಕ್ಕೆ ಮುಂದಾದ ರೈತರು! - athani belgavi latest news

ಕಳೆದ ಸಾಲಿನಲ್ಲಿ ಉಂಟಾದ ಕೃಷ್ಣಾ ನದಿ ಪ್ರವಾಹದಿಂದ ಜನವಾಡ-ಹಿಪ್ಪರಗಿ ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಈವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. ಪರಿಣಾಮ, ಸ್ವತಃ ರೈತರೇ ತಮ್ಮ ಹಣದಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

road construction by athani farmers
ಹಣ ಸಂಗ್ರಹಿಸಿ ರಸ್ತೆ ನಿರ್ಮಾಣಕ್ಕೆ ಮುಂದಾದ ರೈತರು

By

Published : Oct 28, 2020, 4:55 PM IST

Updated : Oct 28, 2020, 5:05 PM IST

ಅಥಣಿ: ಕಳೆದ ವರ್ಷ ಉಂಟಾದ ಕೃಷ್ಣಾ ನದಿ ಪ್ರವಾಹದಿಂದ ನದಿ ತೀರದ ಗ್ರಾಮವಾದ ಜನವಾಡ-ಹಿಪ್ಪರಗಿ ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಈ ಹಿನ್ನೆಲೆ, ರಸ್ತೆ ಮರು ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ವತಃ ರೈತರೇ ತಮ್ಮ ಹಣದಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಇವರ ಸ್ವಕ್ಷೇತ್ರದಲ್ಲಿ ರಸ್ತೆ ಹದಗೆಟ್ಟ ಹಿನ್ನೆಲೆ ಕಬ್ಬು ಸಾಗಣೆಗೆ ತೊಂದರೆ ಉಂಟಾದ ಪರಿಣಾಮ ರೈತರೇ ಹಣವನ್ನು ವಂತಿಗೆ ಸಂಗ್ರಹಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹಾಗೂ ಈ ರಸ್ತೆಯಲ್ಲಿ ಪ್ರಯಾಣಿಸುವ ಸವಾರರಲ್ಲಿ ಅವರಿಗೆ ಸಾಧ್ಯವಾದಷ್ಟು ಹಣವನ್ನು ರೈತರು ತೆಗೆದುಕೊಂಡು ರಸ್ತೆ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.

ಹಣ ಸಂಗ್ರಹಿಸಿ ರಸ್ತೆ ನಿರ್ಮಾಣಕ್ಕೆ ಮುಂದಾದ ರೈತರು

ಈ ಕುರಿತು ಗ್ರಾಮಸ್ಥ ಅಪ್ಪಯ್ಯ ಗುರುವ ಮಾತನಾಡಿ, ತಾಲೂಕಿನಲ್ಲಿ ಇಬ್ಬರು ಪ್ರಭಾವಿ ರಾಜಕಾರಣಿಗಳಾದ ಡಿಸಿಎಂ ಸವದಿ ಮತ್ತು ಶಾಸಕ ಕುಮಟಳ್ಳಿ ಇದ್ದರೂ ಕೂಡ ನಮ್ಮ ಜನವಾಡ ಗ್ರಾಮಕ್ಕೆ ಯಾರೂ ಕೂಡ ಭೆಟಿ ನೀಡಿಲ್ಲ. ಪ್ರವಾಹದಿಂದ ತತ್ತರಿಸಿರುವ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಕಬ್ಬಿನ ಹಂಗಾಮು ಆಗಿರೋದ್ರಿಂದ ಕಬ್ಬು ತುಂಬಿದ ವಾಹನಗಳಿಗೆ ಸಂಚರಿಸುವುದು ಕಷ್ಟವಾಗಿದೆ. ಅಲ್ಲದೇ, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸಾಹಸದ ಕೆಲಸವಾಗಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಆದ್ರೆ ಯಾವುದೇ ಪ್ರಯೋಜನವಾಗದೆ ಬೇಸತ್ತ ಜನವಾಡ ಗ್ರಾಮದ ರೈತರು ಜೊತೆಯಾಗಿ ಒಬ್ಬರಿಗೆ ಇಂತಿಷ್ಟು ಹಣವನ್ನು ನಿಗದಿ ಪಡಿಸಿ ವಂತಿಕೆ ಮಾಡಿ ಯಂತ್ರಗಳ ಸಹಾಯದಿಂದ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Last Updated : Oct 28, 2020, 5:05 PM IST

ABOUT THE AUTHOR

...view details