ಬೆಳಗಾವಿ: ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜಾಸ್ತಿಯಾಗಿದ್ದು, ಅನೇಕ ಗ್ರಾಮಗಳಲ್ಲಿ ಮಳೆ ನೀರಿ ಹೊಕ್ಕಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ಅರ್ಧ ಕಿ.ಮೀ. ರಸ್ತೆ ಕುಸಿದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಬೈಲಹೊಂಗಲದಲ್ಲಿ ಮಳೆ ಆರ್ಭಟಕ್ಕೆ ಕುಸಿದ ರಸ್ತೆ: ಮೂರು ಗ್ರಾಮಗಳ ಸಂಪರ್ಕ ಕಡಿತ - Belagavi rain effect
ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ರಸ್ತೆ ಸುಮಾರು 5 ಕಿ.ಮೀ.ವರೆಗೂ ಕುಸಿದಿದ್ದು, ಮೂರು ಹಳ್ಳಿಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ.
ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳು ಕುಸಿತ್ತಿವೆ. ಅಲ್ಲದೆ ಮನೆಗಳು ಸಹ ನೆಲಕ್ಕೆ ಉರುಳುತ್ತಿವೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ರಸ್ತೆ ಸುಮಾರು 5 ಕಿ.ಮೀ.ವರೆಗೂ ಕುಸಿದಿದ್ದು, ಮೂರು ಹಳ್ಳಿಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ.
ಎಂ.ಕೆ ಹುಬ್ಬಳ್ಳಿ, ಪಟ್ಟಿಹಾಳ, ಗದ್ದಿಕೇರಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದ್ದು, ಮಳೆಯ ಪ್ರಮಾಣ ಜಾಸ್ತಿಯಾದ ಪರಿಣಾಮ ಈ ಗ್ರಾಮಗಳಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬೆಳಗಾವಿ ಜಿಲ್ಲೆ ಮತ್ತೊಮ್ಮೆ ಮಳೆರಾಯನ ಅವಕೃಪೆಗೆ ಒಳಗಾಗುವುದಂತೂ ಸುಳ್ಳಲ್ಲ.