ಕರ್ನಾಟಕ

karnataka

ETV Bharat / state

ಬೈಲಹೊಂಗಲ ಬಳಿ ಭೀಕರ ರಸ್ತೆ ಅಪಘಾತ: ತಾಯಿ-ಮಗು ಸೇರಿ ಮೂವರ ದುರ್ಮರಣ - ಬೈಲಹೊಂಗಲ ಅಪಘಾತ ತಾಯಿ-ಮಗು ಸಾವು ಸುದ್ದಿ

ಬೆಳಗಾವಿಯಲ್ಲಿ ಲಾರಿ ಹಾಗೂ ಬೊಲೆರೋ ವಾಹನ ಡಿಕ್ಕಿಯಾಗಿ ತಾಯಿ, ಮಗ ಸೇರಿ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಮೂವರ ದುರ್ಮರಣ
ಮೂವರ ದುರ್ಮರಣ

By

Published : Jan 17, 2020, 11:31 PM IST

ಬೆಳಗಾವಿ:ಲಾರಿ ಹಾಗೂ ಬೊಲೆರೋ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಾಯಿ, ಮಗ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಬಳಿ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಕಡಬಿ ಶಿವಾಪುರ ನಿವಾಸಿ ಲಕ್ಷ್ಮಿ ಕುಡದೊಳ್ಳಿ (30) ಕುಮಾರ್ ಕುಡದೊಳ್ಳಿ (8) ಹಾಗೂ ಸೋಮನಟ್ಟಿಯ ತುಳಜನ್ನವರ್ (35) ಮೃತಪಟ್ಟವರು. ಘಟನೆಯಲ್ಲಿ ಬೊಲೆರೋದಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ‌ನೀಡಲಾಗುತ್ತಿದೆ. ಯರಗಟ್ಟಿಯಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಲಾರಿ ಹಾಗೂ ಬೆಳಗಾವಿಯಿಂದ ಯರಗಟ್ಟಿಯತ್ತ ತೆರಳುತ್ತಿದ್ದ ಬೊಲೆರೋ ಮಧ್ಯೆ ಅಪಘಾತ ಸಂಭವಿಸಿದೆ. ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ABOUT THE AUTHOR

...view details