ಕರ್ನಾಟಕ

karnataka

ETV Bharat / state

ಬೆಳಗಾವಿ: ಲಾರಿ ಹರಿದು ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ‌ಸಾವು - ಈಟಿವಿ ಭಾರತ ಕನ್ನಡ

ಬೈಕ್​ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

road-accident-in-belagavi-two-were-died
ಬೈಕ್ ಲಾರಿ ಮುಖಾಮುಖಿ ಡಿಕ್ಕಿ : ಇಬ್ಬರು ಸ್ಥಳದಲ್ಲೇ ‌ಸಾವು

By

Published : Oct 15, 2022, 10:50 PM IST

ಬೆಳಗಾವಿ : ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಸಮೀಪ ನಡೆದಿದೆ. ಮೃತರನ್ನು ಹಣಮಾಪುರ ನಿವಾಸಿ ಅರ್ಜುನ ತಿಮ್ಮಣ್ಣ ಬಂಡಿವಡ್ಡರ (44), ಓಬಳಾಪುರದ ಸುವರ್ಣಾ ಬಸಪ್ಪ ಹೊಳೆಯನ್ನರ (35) ಎಂದು ಗುರುತಿಸಲಾಗಿದೆ.

ರಾಮದುರ್ಗದಿಂದ ಮುದಕವಿ ಕಡೆಗೆ ಹೋಗುತ್ತಿದ್ದ ಲಾರಿ, ಮುದಕವಿಯಿಂದ ರಾಮದುರ್ಗದ ಕಡೆ ಬರುತ್ತಿದ್ದ ಬೈಕ್​ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿಯ ಚಕ್ರ ಬೈಕ್​ನಲ್ಲಿದ್ದವರ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಪಿಎಸ್ಐ ಶಿವಾನಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಮದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ನಂಜನಗೂಡಿನಲ್ಲಿ ಕಳ್ಳರಿಗೆ ಶಿಕ್ಷಕರ ಮನೆಗಳೇ ಟಾರ್ಗೆಟ್

ABOUT THE AUTHOR

...view details