ಚಿಕ್ಕೋಡಿ : ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರಾಲಿಗೆ ಸಿಲುಕಿ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇಡಲಿಹಾಳದ ಶಾಂತಿನಗರ ಸರ್ಕಲ್ ಬಳಿ ನಡೆದಿದೆ.
ಬೇಡಕಿಹಾಳ ಗ್ರಾಮದ ಸತ್ಯಂ ಸೂರ್ಯವಂಶಿ (14) ಮೃತ ಬಾಲಕ. ಕಬ್ಬು ತುಂಬಿದ ಟ್ರ್ಯಾಕ್ಟರ್ ವೆಂಕಟೇಶ್ವರ ಕಾರ್ಖಾನೆಗೆ ಹೋಗುತ್ತಿದ್ದಾಗ ಅಮರ ದೇಸಾಯಿ ಮತ್ತು ಆತನ ಅಣ್ಣನ ಮಗ ಸತ್ಯಂ ಸೂರ್ಯವಂಶಿ ಅವರು ಬೈಕ್ ಮೇಲೆ ನೀರಿನ ಕ್ಯಾನ್ ಇಟ್ಟುಕೊಂಡು ಬರುತ್ತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಟ್ರ್ಯಾಕ್ಟರ್ ಟ್ರಾಲಿಯ ಚಕ್ರಕ್ಕೆ ಸಿಲುಕಿದ್ದರಿಂದ ಬಾಲಕ ಸತ್ಯಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.