ಕರ್ನಾಟಕ

karnataka

ETV Bharat / state

ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಇಬ್ಬರು ಸ್ಥಳದಲ್ಲೇ ಸಾವು - ಹಾರೂಗೇರಿ ಪೊಲೀಸ್ ಠಾಣೆ

ರಾಯಬಾಗ ತಾಲೂಕಿನ ಅಳಗವಾಡಿ ಕೆನಾಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ. ಅದರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Accident
ಅಪಘಾತ

By

Published : Mar 24, 2022, 12:14 PM IST

ಚಿಕ್ಕೋಡಿ: ಅಪರಿಚಿತ ವಾಹನ‌ವೊಂದು ಡಿಕ್ಕಿ ಹೊಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ ಘಟನೆ ರಾಯಬಾಗ ತಾಲೂಕಿನ ಅಳಗವಾಡಿ ಕೆನಾಲ್ ಬಳಿ ನಡೆದಿದೆ.

ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ

ರಾಯಬಾಗ ತಾಲ್ಲೂಕಿನ ಬಸ್ತವಾಡ ಗ್ರಾಮದ ಲಕ್ಷ್ಮಣ್ ಲಗಮಾಣ ಬಿ. ಪಾಟೀಲ್ (55) ಹಾಗೂ ಮಾಯಪ್ಪ ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣದ ಹಿನ್ನೆಲೆ ನೋಡುವುದಾದರೆ ರಾಯಬಾಗದಿಂದ ಹಿಡಕಲ್ ಗ್ರಾಮಕ್ಕೆ ತೆರಳುವಾಗ ನಿಡಗುಂದಿ ಮತ್ತು ಅಳಗವಾಡಿ ಮಧ್ಯದಲ್ಲಿ ಬರುವ ಕೆನಾಲ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕೆಳಗಡೆ ಬಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details