ಚಿಕ್ಕೋಡಿ: ಹುಕ್ಕೇರಿಯ ಹಿರೇಮಠಕ್ಕೆ ಬೆಳಗಾವಿ ನಿವೃತ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ದಂಪತಿ ಸಮೇತ ಭೇಟಿ ನೀಡಿ ಚಂದ್ರಶೇಖರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ದಂಪತಿ ಸಮೇತ ಹುಕ್ಕೇರಿ ಮಠಕ್ಕೆ ಭೇಟಿ ನೀಡಿದ ನಿವೃತ್ತ ಡಿಸಿ ಬೊಮ್ಮನಹಳ್ಳಿ - ಹುಕ್ಕೇರಿಯ ಹಿರೇಮಠ
ಬೆಳಗಾವಿ ನಿವೃತ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ದಂಪತಿ ಹುಕ್ಕೇರಿಯ ಹಿರೇಮಠಕ್ಕೆ ಭೇಟಿ ನೀಡಿ ಚಂದ್ರಶೇಖರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಬೊಮ್ಮನಹಳ್ಳಿ ದಂಪತಿಯನ್ನು ಹುಕ್ಕೇರಿ ತಹಶೀಲ್ದಾರ್ ಅಶೋಕ ಗುರಾಣಿ ಪ್ರವಾಸಿ ಮಂದಿರದ ಹತ್ತಿರ ಸ್ವಾಗತಿಸಿದರು.
ಹುಕ್ಕೇರಿ ನಗರಕ್ಕೆ ಆಗಮಿಸಿದ ನಿವೃತ್ತ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ದಂಪತಿಯನ್ನು ಹುಕ್ಕೇರಿ ತಹಶೀಲ್ದಾರ್ ಅಶೋಕ ಗುರಾಣಿ ಪ್ರವಾಸಿ ಮಂದಿರದ ಹತ್ತಿರ ಸ್ವಾಗತಿಸಿದರು. ನಂತರ ಬೊಮ್ಮನಹಳ್ಳಿ ಸಹಪಾಟಿ ಹಾಗೂ ಆತ್ಮೀಯ ಗೆಳೆಯ ಪ್ರೊ.ಪಿ.ಜಿ ಕೊಣ್ಣೂರ ಗುರುಗಳ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದರು.
ಬಳಿಕ ನೇರವಾಗಿ ಹಿರೇಮಠಕ್ಕೆ ಭೇಟಿ ನೀಡಿ ಚಂದ್ರಶೇಖರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಬೊಮ್ಮನಹಳ್ಳಿ, ಬೆಳಗಾವಿ ಜಿಲ್ಲೆಯ ಮಹಾನ್ ಮಠಾಧೀಶರ, ಗುರುಗಳ ಆಶಿರ್ವಾದ ಹಾಗೂ ಜಿಲ್ಲೆಯ ಜನತೆಯ ಸಹಕಾರದಿಂದ ಯಶಸ್ವಿಯಾಗಿ ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಅವರೆಲ್ಲರಿಗೂ ನಾನು ಋಣಿ ಯಾಗಿರುತ್ತೇನೆ. ಇಂದು ಗುರು ಪೂರ್ಣಿಮಾ ನಿಮಿತ್ತ ಹುಕ್ಕೇರಿ ಶ್ರೀ ಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.