ಪಂಚಮಸಾಲಿ ಸಮಾಜದ ಮೀಸಲಾತಿ ಸ್ಪಷ್ಟವಾಗಿಲ್ಲ: ಜಯಮೃತ್ಯುಂಜಯ ಶ್ರೀ ಬೆಳಗಾವಿ :ಪಂಚಮಸಾಲಿ ಸಮಾಜಕ್ಕೆ ಸರ್ಕಾರದ ಮೀಸಲಾತಿ ವಿಚಾರ ಸ್ಪಷ್ಟವಾಗಿಲ್ಲ. ಹೀಗಾಗಿ ಯಾರೂ ವಿಜಯೋತ್ಸವ ಅಥವಾ ತಿರಸ್ಕಾರ ವ್ಯಕ್ತಪಡಿಸಬೇಡಿ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮೀಸಲಾತಿ ನೀಡಿದೆ ಎಂದು ಸಚಿವರು ಹೇಳುತ್ತಿದ್ದಾರೆ. ಸಚಿವ ಮಾಧುಸ್ವಾಮಿ ಹೇಳಿಕೆ ಸ್ಪಷ್ಟವಾಗಿಲ್ಲ ಎಂದರು.
ಈ ಬಗ್ಗೆ ಪಂಚಮಸಾಲಿ ಸಮಾಜದ ಮುಖಂಡರಾದ ಈರಣ್ಣ ಕಡಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಮಾತನಾಡಿದ್ದೇನೆ. ಅವರು ಮುಂಜಾನೆ ಬರುತ್ತೇನೆ ಎಂದು ಹೇಳಿದ್ದಾರೆ. ಅವರು ಬಂದ ಮೇಲೆ ಚರ್ಚಿಸಿದ ನಂತರವೇ ನಿರ್ಧಾರ ತಿಳಿಸುತ್ತೇನೆ. ಕ್ಯಾಬಿನೆಟ್ ಪ್ರತಿ ನಮಗೆ ಇನ್ನೂ ಸಿಕ್ಕಿಲ್ಲ ಎಂದರು.
ಸರ್ಕಾರ ಮಹತ್ವದ ನಿರ್ಧಾರ: ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಸಿಹಿಸುದ್ದಿ ನೀಡಿದೆ. ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.
3ಬಿ ಪ್ರವರ್ಗದಲ್ಲಿದ್ದ ಲಿಂಗಾಯತರಿಗೆ 2ಡಿ ಪ್ರವರ್ಗ ಹಾಗೂ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗರಿಗಾಗಿ 2ಸಿ ಪ್ರತ್ಯೇಕ ಪ್ರವರ್ಗ ರಚಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆ ಮೂಲಕ ಬೊಮ್ಮಾಯಿ ಸರ್ಕಾರದ ಜಾಣ ನಡೆ ಇಟ್ಟಿದೆ. ಆದರೆ, ಇನ್ನೂ ಮೀಸಲಾತಿ ಪ್ರಮಾಣ ಘೋಷಿಸಿಲ್ಲ. ಮುಂದಿನ ದಿನಗಳಲ್ಲಿ ಮೀಸಲಾತಿ ಪ್ರಮಾಣ ಘೋಷಿಸಲು ತೀರ್ಮಾನಿಸಿದೆ.
ಇನ್ನೂ ಮೀಸಲಾತಿ ಪ್ರಮಾಣವನ್ನು ನಿಗದಿಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಮೀಸಲಾತಿಯ ಪ್ರಮಾಣ ನಿಗದಿಪಡಿಸಲಾಗುವುದು. ಈ ಎರಡೂ ಸಮುದಾಯಗಳಿಗೆ EWSನ 10% ಮೀಸಲಾತಿಯಿಂದ ಎಷ್ಟು ಉಳಿಯುತ್ತೋ ಅದನ್ನು 2D ಮತ್ತು 2Cಗೆ ಶಿಫ್ಟ್ ಮಾಡುವ ಚಿಂತನೆ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
2ಎ ಮತ್ತು 2 ಬಿ ಮೀಸಲಾತಿಯಲ್ಲಿರುವ ಸಮುದಾಯಗಳಿಗೆ ಯಾವುದೇ ತೊಂದೆರೆಯಾಗಬಾರದೆಂದು ಹಿಂದೂಳಿದ ವರ್ಗಗಳ ಆಯೋಗ ವರದಿ ನೀಡಿದೆ. 3ಎ, 3ಬಿಯನ್ನು ಕ್ರಮವಾಗಿ 2ಸಿ ಮತ್ತು 2ಡಿ ರಚಿಸಲು ಹಿಂದೂಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದ್ದು, ಅದನ್ನು ಸರ್ಕಾರ ಒಪ್ಪಿದೆ. ಬೇರೆ ಯಾರಿಗೂ ತೊಂದರೆಯಾಗದಂತೆ ಹೊಸದಾಗಿ 2ಸಿ ಮತ್ತು 2ಡಿ ರಚನೆ ಮಾಡುತ್ತಿದ್ದೇವೆ. ಮುಂದೆ EWSಯಲ್ಲಿ ಉಳಿಯುವ ಮೀಸಲಾತಿಯನ್ನು 2ಸಿ ಮತ್ತು 2ಡಿಗೆ ಹಂಚಲು ನಿರ್ಧರಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು. ಮೂಲಗಳ ಪ್ರಕಾರ, ಲಿಂಗಾಯತರಿಗಾಗಿ 2D ಪ್ರವರ್ಗದಲ್ಲಿ 7% ಮೀಸಲಾತಿ ಹಾಗೂ ಒಕ್ಕಲಿಗರಿಗಾಗಿ 2C ಪ್ರವರ್ಗದಲ್ಲಿ 6% ಮೀಸಲಾತಿ ಕಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:ಪಂಚಮಸಾಲಿಗಳ ಒಡಲಿನ ಧ್ವನಿ ಸರ್ಕಾರಕ್ಕೆ ಮುಟ್ಟಿದೆ: ಜಯಮೃತ್ಯುಂಜಯ ಸ್ವಾಮೀಜಿ