ಚಿಕ್ಕೋಡಿ:ಸ್ವಾತಂತ್ರ್ಯ ದಿನಾಚರಣೆ ದಿನದಂದು ತಳವಾರ ಸಮಾಜದ ವತಿಯಿಂದ ತಳವಾರ - ಪರಿವಾರ ಸಮಾಜ ಬಾಂಧವರಿಗೆ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ಎಸ್ಟಿಗೆ ಸೇರಿಸುವಂತೆ ತಳವಾರ-ಪರಿವಾರ ಸಮಾಜದ ವತಿಯಿಂದ ಮನವಿ - ಚಿಕ್ಕೋಡಿ ತಹಶೀಲ್ದಾರ್
ತಳವಾರ-ಪರಿವಾರ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವಂತೆ ತಳವಾರ - ಪರಿವಾರ ಸಮಾಜದ ವತಿಯಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
![ಎಸ್ಟಿಗೆ ಸೇರಿಸುವಂತೆ ತಳವಾರ-ಪರಿವಾರ ಸಮಾಜದ ವತಿಯಿಂದ ಮನವಿ Appeal](https://etvbharatimages.akamaized.net/etvbharat/prod-images/768-512-03:33:18:1597485798-kn-ckd-2-thashildarge-manavi-script-ka10023-15082020111117-1508f-1597470077-245.jpg)
Appeal
ರಾಜ್ಯ ಸರ್ಕಾರ ರಾಷ್ಟ್ರಪತಿ ಅವರ ಅಂಗೀಕಾರದ ಗೆಜೆಟ್ಗೆ ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದ ಅವರು, ರಾಜ್ಯ ಸರ್ಕಾರ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಎಸ್‌ಟಿ ವರ್ಗಕ್ಕೆ ಕೋಳಿ ಮತ್ತು ಪರಿವಾರ ಸಮಾಜವನ್ನು ಸೇರಿಸದೆ ತಿದ್ದುಪಡಿ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಶಾಲೆಗಳಿಗೆ ರಜೆ ಇದ್ದು, ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಮುಂಚೆ ನಮ್ಮ ತಳವಾರ - ಪರಿವಾರವನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕೆಂದು ಮನವಿ ಮಾಡಿಕೊಂಡರು.
Last Updated : Aug 15, 2020, 7:09 PM IST