ಬೆಳಗಾವಿ:ನಗರದ ಕ್ಯಾಂಪ್ ಪ್ರದೇಶದಲ್ಲಿನ ದಸರಾ ಆಚರಣೆ ಹಾಗೂ ರಥೋತ್ಸವ ನಡೆಸಲು ಪರವಾನಗಿ ನೀಡಬೇಕು ಎಂದು ಆಗ್ರಹಿಸಿ ಕ್ಯಾಂಪ್ ಪ್ರದೇಶದ ಜನರು ದಸರಾ ಆಚರಣೆ ಸಮಿತಿಯ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ದಸರಾ ಆಚರಣೆಗೆ ಅನುಮತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದ ದಸರಾ ಉಸ್ತುವಾರಿ ಮುಖಂಡರು. ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡ ಕ್ಯಾಂಪ್ ಪ್ರದೇಶದ ದಸರಾ ಉಸ್ತುವಾರಿ ಮುಖಂಡರು, ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಆಚರಣೆಗೆ ಪರವಾನಗಿ ಕೊಡಿಸಬೇಕು. ಜೊತೆಗೆ ಸರ್ಕಾರದ ಕೋವಿಡ್ (19) ಮಾರ್ಗ ಸೂಚಿಗಳನ್ವಯ ನಿಗದಿತ ಸಂಖ್ಯೆಯಲ್ಲಿ ಜನರು ಸೇರಿ ರಥೋತ್ಸವ ನಡೆಸಲು ಪರವಾನಗಿ ಕೊಡಿಸಬೇಕೆಂದು ಆಗ್ರಹಿಸಿದರು.
ಸಮಾಜ ಸೇವಕ ಪೃಥ್ವಿ ಸಿಂಗ್ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ಕ್ಯಾಂಪ್ ಪ್ರದೇಶದಲ್ಲಿ ದಸರಾ ಆಚರಿಸಲು ಅನುಮತಿ ನೀಡಬೇಕು. ಎರಡು ನೂರು ವರ್ಷಗಳಿಂದ ದಸರಾ ಆಚರಣೆ ಸಂಪ್ರದಾಯ ನಡೆಸಿಕೊಂಡು ಬರಲಾಗಿದೆ. ನಿಗದಿತ ಸಂಖ್ಯೆಯ ಜನರನ್ನು ಸೇರಿಸಿ ರಥೋತ್ಸವ ನಡೆಸಲು ಪರವಾನಗಿ ನೀಡಬೇಕು. ಮೈಸೂರಿನಲ್ಲಿ 300 ಜನರು ಸೇರಿ ದಸರಾ ಮಾಡುವುದಾದರೆ ಬೆಳಗಾವಿಯಲ್ಲಿ 100 ಜನರು ಸೇರಿ ದಸರಾ ಆಚರಿಸಲು ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ 100 ಜನರು ಸೇರಿ ರಥೋತ್ಸವ ನಡೆಸಲು ಪರವಾನಗಿ ನೀಡಬೇಕೆಂದು ಮನವಿ ಮಾಡಿದರು.
ದಸರಾ ಆಚರಣೆಗೆ ಅನುಮತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದ ದಸರಾ ಉಸ್ತುವಾರಿ ಮುಖಂಡರು. ಈ ವೇಳೆ, ನಾಳೆ ಜಿಲ್ಲಾಧಿಕಾರಿಗಳೊಂದಿಗೆ ನಡೆಯುವ ಸಭೆಯಲ್ಲಿ ಕಮಿಷನರ್ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.