ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದೆ.
ಬೆಳಗಾವಿ; 319 ಜನರಿಗೆ ಸೋಂಕು.. 150 ಜನ ಡಿಸ್ಚಾರ್ಜ್ - ಬೆಳಗಾವಿ ಜಿಲ್ಲೆಯಲ್ಲಿಂದು 319 ಜನರಿಗೆ ಕೊರೊನಾ
ಬೆಳಗಾವಿ ಜಿಲ್ಲೆಯ ಕೋವಿಡ್ ಪ್ರಕರಣಗಳ ಕುರಿತ ವರದಿ ಇಲ್ಲಿದೆ.
![ಬೆಳಗಾವಿ; 319 ಜನರಿಗೆ ಸೋಂಕು.. 150 ಜನ ಡಿಸ್ಚಾರ್ಜ್ Belagavi District](https://etvbharatimages.akamaized.net/etvbharat/prod-images/768-512-8544053-367-8544053-1598292723382.jpg)
ಬೆಳಗಾವಿ ಜಿಲ್ಲೆಯಲ್ಲಿಂದು 319 ಜನರಿಗೆ ಕೊರೊನಾ
ಜಿಲ್ಲೆಯಲ್ಲಿಂದು 319 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,248 ದಾಟಿದೆ. ಇಂದು ಸೋಂಕಿಗೆ ಐವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 161 ಕ್ಕೆ ಏರಿಕೆಯಾಗಿದೆ.
ಬೆಳಗಾವಿಯ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 150 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 4129 ಆ್ಯಕ್ಟಿವ್ ಕೇಸ್ಗಳಿವೆ.