ಅಥಣಿ :ಹಿಪ್ಪರಗಿ ಬ್ಯಾರೇಜ್ ಕೆಳಭಾಗದ ಸರಿ ಸುಮಾರು 40 ಹಳ್ಳಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಶಾಸಕ ಮಹೇಶ್ ಕುಮಟಳ್ಳಿ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಮತ್ತು ಜಮಖಂಡಿ ಮತಕ್ಷೇತ್ರದ ಶಾಸಕ ಆನಂದ್ ನೇಮಗೌಡ ನೇತೃತ್ವದಲ್ಲಿಂದು 0.4 ಟಿಎಂಸಿ ನೀರು ಬಿಡುಗಡೆಗೆ ಚಾಲನೆ ನೀಡಲಾಯಿತು.
ಬೆಳಗಾವಿಯ 40 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು 0.4 ಟಿಎಂಸಿ ನೀರು ಬಿಡುಗಡೆ..
ಈಟಿವಿ ಭಾರತ ನೀರಿನ ಅಭಾವದ ಕುರಿತು ಸುದ್ದಿ ಮಾಡಿ ಶಾಸಕರ ಗಮನ ಸೆಳೆದಿತ್ತು. ಇದರ ಪರಿಣಾಮವಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮೇ ತಿಂಗಳ ಮೊದಲ ವಾರದಲ್ಲಿ ಹಿಪ್ಪರಗಿ ಬ್ಯಾರೇಜ್ ಕೆಳಭಾಗಕ್ಕೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು.
ಕಳೆದ ಹದಿನೈದು ದಿನಗಳಿಂದ ಹಿಪ್ಪರಗಿ ಬ್ಯಾರೇಜ್ ಕೆಳಭಾಗದ ಕೃಷ್ಣಾ ನದಿ ತೀರದ ರೈತರಿಗೆ ಜೀವಜಲ ಅಭಾವದ ಆತಂಕದ ಮನೆ ಮಾಡಿತ್ತು. ಇಂದು ಸರ್ಕಾರದ ನಿರ್ದೇಶನದಂತೆ ಬೇಸಿಗೆ ಸಂದರ್ಭದಲ್ಲಿ ಮಾತ್ರ ಕುಡಿಯೋಕೆ ನೀರು ಉಪಯೋಗ ಮಾಡುವಂತೆ ಹಲವಾರು ಷರತ್ತು ವಿಧಿಸಿ ಹಿಪ್ಪರಗಿ ಬ್ಯಾರೇಜ್ನಿಂದ ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿಸಿದ್ದಾರೆ.
ಈಟಿವಿ ಭಾರತ ನೀರಿನ ಅಭಾವದ ಕುರಿತು ಸುದ್ದಿ ಮಾಡಿ ಶಾಸಕರ ಗಮನ ಸೆಳೆದಿತ್ತು. ಇದರ ಪರಿಣಾಮವಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಈಟಿವಿ ಭಾರತ ಜೊತೆ ಮಾತನಾಡಿ ಮೇ ತಿಂಗಳ ಮೊದಲ ವಾರದಲ್ಲಿ ಹಿಪ್ಪರಗಿ ಬ್ಯಾರೇಜ್ ಕೆಳಭಾಗಕ್ಕೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದರ ಪ್ರತಿಫಲವಾಗಿ ಇಂದು ಕೃಷ್ಣಾ ನದಿ ಮುಖಾಂತರ ನಲ್ವತ್ತು ಗ್ರಾಮಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಬೇಸಿಗೆ ಸಂದರ್ಭದಲ್ಲಿ ದನಕರುಗಳಿಗೆ ಹಾಗೂ ಜನರಿಗೆ ಕುಡಿಯುವ ನೀರಿನ ಅಭಾವ ತಪ್ಪಿದಂತಾಗಿದೆ.