ಬೆಳಗಾವಿ: ಕೊರೊನಾ ವಾರಿಯರ್ಸ್‌ಗೆ ಹಿಂಡಲಗಾ ಪೈಪ್ ಲೈನ್ ನಿವಾಸಿಗಳು ಪುಷ್ಪವೃಷ್ಟಿಯೊಂದಿಗೆ ಮೆರವಣಿಗೆ ನಡೆಸುವ ಮೂಲಕ ಅದ್ಧೂರಿಯಾಗಿ ಸತ್ಕರಿಸಿ ಗೌರವ ಸಲ್ಲಿಸಿದರು.
ಬೆಳಗಾವಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಪುಷ್ಪವೃಷ್ಟಿ, ಮೆರವಣಿಗೆ ಮಾಡಿ ವಿಶೇಷ ಗೌರವ - belagavi regards to the Corona Warriors
ಬೆಳಗಾವಿ ಹಿಂಡಲಗಾ ಪೈಪ್ ಲೈನ್ ನಗರದಲ್ಲಿ ಕೊರೊನಾ ವಾರಿಯರ್ಸ್ ಮೆರವಣಿಗೆ ಮಾಡುವ ರಸ್ತೆಗಳಿಗೆ ಮಹಿಳೆಯರು ರಂಗೋಲಿ ಬಿಡಿಸಿ ಸ್ವಾಗತಿಸಿ ಚಪ್ಪಾಳೆ ತಟ್ಟಿ ಹೂ ಮಳೆ ಸುರಿಸಿ ಗೌರವಿಸಿದರು.
ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಕೆ
ಕೊರೊನಾ ವಾರಿಯರ್ಸ್ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತರು, ವೈದ್ಯರು, ಆರೋಗ್ಯ ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಯ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಅಭಿಮಾನ ಪೂರ್ವಕವಾಗಿ ಸನ್ಮಾನಿಸಿ ಗೌರವ ಅರ್ಪಣೆ ಮಾಡಲಾಗಿದೆ ಎಂದು ಕಾರ್ಯಕರ್ತ ನೇತೃತ್ವ ವಹಿಸಿದ ಸುರೇಂದ್ರ ಆನಗೋಳಕರ ತಿಳಿಸಿದರು.
ಈ ಸಂದರ್ಭದಲ್ಲಿ ಖಡೇಬಜಾರ ಎಸಿಪಿ ಚಂದ್ರಪ್ಪ,ಕ್ಯಾಂಪ್ ಸಿಪಿಐ ಸಂತೋಷ್ ಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.