ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧೋ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 14 ಸಾವಿರಕ್ಕೂ ಅಧಿಕ ಕ್ಯೂಸಕ್ ನೀರು ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಎಂಟು ಅಡಿಯಷ್ಟು ಇಳಿಕೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲೂ ಕೊಂಚ ಕಡಿಮೆ ಆಗಿದ್ದು 98,000 ಕ್ಯೂಸೆಕ್ ಒಳ ಹರಿವು ಇದೆ ಎಂದು ತಹಶೀಲ್ದಾರ್ ಶುಭಾಸ್ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ ಪ್ರಮಾಣ: 98,000 ಕ್ಯೂಸೆಕ್ಗೆ ಇಳಿದ ಕೃಷ್ಣಾ ನದಿ ಒಳಹರಿವು
ಕಳೆದ 24 ಗಂಟೆಗಳಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಎಂಟು ಅಡಿಯಷ್ಟು ಇಳಿಕೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 98,000 ಕ್ಯೂಸೆಕ್ಗೆ ತಗ್ಗಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 80,500 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 17,600 ಕ್ಯೂಸೆಕ್ ನೀರು ಹೀಗೆ ಒಟ್ಟು 98,000 ಕ್ಯೂಸೆಕ್ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ- 59 ಮಿ.ಮೀ, ನವಜಾ - 101 ಮಿ.ಮೀ, ಮಹಾಬಲೇಶ್ವರ - 120 ಮಿ.ಮೀ, ವಾರಣಾ - 38 ಮಿ.ಮೀ, ಕಾಳಮ್ಮವಾಡಿ - 38 ಮಿ.ಮೀ, ರಾಧಾನಗರಿ - 70 ಮಿ.ಮೀ, ಪಾಟಗಾಂವ - 66 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಚಿಕ್ಕೋಡಿ ಉಪವಿಭಾಗಗಳಾದ ಅಂಕಲಿ - 1.4 ಮಿ.ಮೀ, ಚಿಕ್ಕೋಡಿ - 2.0 ಮಿ.ಮೀ ಹಾಗೂ ಸದಲಗಾ - 2.0 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ ಶೇ75ರಷ್ಟು, ವಾರಣಾ ಜಲಾಶಯ ಶೇ87, ರಾಧಾನಗರಿ ಜಲಾಶಯ ಶೇ99, ಕಣೇರ ಜಲಾಶಯ ಶೇ78, ಧೂಮ ಜಲಾಶಯ ಶೇ69, ಪಾಟಗಾಂವ ಶೇ 94.44ರಷ್ಟು ಹಾಗೂ ಧೂದಗಂಗಾ ಶೇ 89.15, ತುಂಬಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಮಾಹಿತಿ ನೀಡಿದ್ದಾರೆ.