ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: 1,50,000 ಕ್ಯೂಸೆಕ್‌ ದಾಟಿದ ಕೃಷ್ಣಾ ನದಿ ಒಳಹರಿವು - Rajapura Barrage of Maharashtra

ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,50,000 ಕ್ಯೂಸೆಕ್‌ ಗಿಂತಲೂ ಅಧಿಕವಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​​ ಶುಭಾಸ್​ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Reduced rainfall in Maharashtra: Krishna River inflow crossed 150,000 cusecs
ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: 1,50,000 ಕ್ಯೂಸೆಕ್‌ ದಾಟಿದ ಕೃಷ್ಣಾ ನದಿ ಒಳಹರಿವು

By

Published : Aug 10, 2020, 3:20 PM IST

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 15 ಸಾವಿರ ಕ್ಯೂಸಕ್‌ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಮತ್ತು ಉಪನದಿನಗಳ ನೀರಿನ ಪ್ರಮಾಣದಲ್ಲಿ ಎರಡು‌ ಅಡಿಯಷ್ಟು ಕಡಿಮೆಯಾಗಿದೆ. ಆದರೆ, ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,50,000 ಕ್ಯೂಸೆಕ್‌ ಗಿಂತಲೂ ಅಧಿಕವಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​​ ಶುಭಾಸ್​ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,20,000 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 31,504 ಕ್ಯೂಸೆಕ್ ನೀರು ಸೇರಿ ಒಟ್ಟು 1,50,000 ಕ್ಯೂಸೆಕ್ ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ-24 ಮಿ.ಮೀ, ನವಜಾ - 50 ಮಿ.ಮೀ, ಮಹಾಬಲೇಶ್ವರ - 50 ಮಿ.ಮೀ, ವಾರಣಾ- 13 ಮಿ.ಮೀ, ಕಾಳಮ್ಮವಾಡಿ- 15 ಮಿ.ಮೀ, ರಾಧಾನಗರಿ- 29 ಮಿ.ಮೀ, ಪಾಟಗಾಂವ- 40 ಮಿ.ಮೀ ಮಳೆಯಾಗಿರುವುದಾಗಿ ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ- 5.2 ಮಿ.ಮೀ, ಅಂಕಲಿ- 2.4 ಮಿ.ಮೀ, ಜೋಡಟ್ಟಿ- 2.3 ಮಿ.ಮೀ ಹಾಗೂ ಸದಲಗಾ - 1.4 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: 1,50,000 ಕ್ಯೂಸೆಕ್‌ ದಾಟಿದ ಕೃಷ್ಣಾ ನದಿ ಒಳಹರಿವು

ಸದ್ಯ ಕೊಯ್ನಾ ಜಲಾಶಯ ಶೇ 71ರಷ್ಟು, ವಾರಣಾ ಜಲಾಶಯ ಶೇ 86ರಷ್ಟು, ರಾಧಾನಗರಿ ಜಲಾಶಯ ಶೇ100ರಷ್ಟು, ಕಣೇರ ಜಲಾಶಯ ಶೇ 73, ಧೂಮ ಜಲಾಶಯ ಶೇ 65, ಪಾಟಗಾಂವ ಶೇ91.83, ಧೂದಗಂಗಾ ಶೇ85.53ರಷ್ಟು ತುಂಬಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಶುಭಾಸ್​ ಸಂಪಗಾಂವಿ ಮಾಹಿತಿ ನೀಡಿದ್ದಾರೆ.

ಇನ್ನೂ ಚಿಕ್ಕೋಡಿ ಉಪವಿಭಾಗ ಹಾಗೂ ನಿಪ್ಪಾಣಿ ತಾಲೂಕಿನ ಎಂಟು ಸೇತುವೆಗಳಾದ ಕಾರದಗಾ - ಬೋಜ, ಬೋಜವಾಡ-ಕುನ್ನೂರ, ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಸಿ, ಸದಲಗಾ-ಬೋರಗಾಂವ, ಮಲ್ಲಿಕವಾಡ-ದತ್ತವಾಡ, ಯಡೂರ-ಕಲ್ಲೋಳ ಹಾಗೂ ಕಾಗವಾಡ ತಾಲೂಕಿನ ಉಗಾರ-ಕುಡಚಿ ಸೇತುವೆಗಳು ಜಲಾವೃತವಾಗಿದ್ದು, ಹದಿನಾರಕ್ಕೂ ಹೆಚ್ಚು ಗ್ರಾಮಗಳ ಜನರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ.

ABOUT THE AUTHOR

...view details