ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: ನದಿಗಳ ಒಳಹರಿವಿನಲ್ಲಿ ಇಳಿಕೆ - River Dudhganga

ಮಹಾರಾಷ್ಟ್ರ, ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು ಇಳಿಮುಖವಾಗಿದೆ.

Reduced Rainfall in Maharashtra: Decline in Rivers Inflow
ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: ನದಿಗಳ ಒಳಹರಿವಿನಲ್ಲಿ ಇಳಿಕೆ

By

Published : Sep 3, 2020, 4:59 PM IST

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಉಪವಿಭಾಗದಲ್ಲಿ ಸಂಪೂರ್ಣವಾಗಿ ಮಳೆ ಕಡಿಮೆಯಾಗಿದ್ದು, ಕೊಯ್ನಾ - 02 ಮಿ.ಮೀ, ನವಜಾ - 02 ಮಿ.ಮೀ, ವಾರಣಾ -12 ಮಿ.ಮೀ, ಕಾಳಮ್ಮವಾಡಿ -33 ಮಿ.ಮೀ, ರಾಧಾನಗರಿ - 3 ಮಿ.ಮೀ, ಪಾಟಗಾಂವ - 10ಮಿ.ಮೀ ಮಳೆಯಾಗಿದೆ.

ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: ನದಿಗಳ ಒಳಹರಿವಿನಲ್ಲಿ ಇಳಿಕೆ

ಇನ್ನು ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲೂ ಇಳಿಮುಖವಾಗಿದೆ. 38,000 ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 34,503 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 4,400 ಕ್ಯೂಸೆಕ್ ನೀರು ಹೀಗೆ ಒಟ್ಟು 38,000 ಕ್ಯೂಸೆಕ್​​ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.

ಸದ್ಯ ಕೊಯ್ನಾ ಜಲಾಶಯ, ವಾರಣಾ, ರಾಧಾನಗರಿ, ಕಣೇರ ಜಲಾಶಯ ಶೇ.97ರಷ್ಟು ತುಂಬಿದೆ. ಧೂಮ ಜಲಾಶಯ ಶೇ. 98ರಷ್ಟು, ಪಾಟಗಾಂವ ಶೇ.100ರಷ್ಟು. ಧೂದಗಂಗಾ ಶೇ, 99ರಷ್ಟು ತುಂಬಿದೆ. ಇನ್ನು ಹಿಪ್ಪರಗಿ ಬ್ಯಾರೆಜ್‌ನಿಂದ 39,000 ಹಾಗೂ ಆಲಮಟ್ಟಿ ಜಲಾಶಯದಿಂದ 48,922 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ABOUT THE AUTHOR

...view details