ಚಿಕ್ಕೋಡಿ(ಬೆಳಗಾವಿ): ದಿನದಿಂದ ದಿನಕ್ಕೆ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ಹರಿವಿನಲ್ಲಿ ಇಳಿಮುಖ ಕಂಡಿದ್ದು, ನದಿ ತೀರದ ಜನರು ಈಗ ನೀರಾಳರಾಗಿದ್ದಾರೆ. ಕೃಷ್ಣಾ ನದಿಒಳ ಹರಿವು 63,000ಕ್ಕೂ ಅಧಿಕ ಕ್ಯೂಸೆಕ್‌ಗಿಂತ ಹೆಚ್ಚಿದೆ ಎಂದು ಚಿಕ್ಕೋಡಿ ತಹಶೀಲ್ದಾರ ಶುಭಾಸ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಕೃಷ್ಣಾ ನದಿ ತೀರದ ಜನರಲ್ಲಿ ಕಡಿಮೆಯಾದ ಪ್ರವಾಹದ ಆತಂಕ - Chikkodi in Belgaum
ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ಹರಿವಿನಲ್ಲಿ ಇಳಿಮುಖ ಕಂಡಿದ್ದು, ನದಿ ತೀರದ ಜನರು ಈಗ ನೀರಾಳರಾಗಿದ್ದಾರೆ. ಕೃಷ್ಣಾ ನದಿ ಒಳಹರಿವು 63,000ಕ್ಕೂ ಅಧಿಕ ಕ್ಯೂಸೆಕ್‌ಗಿಂತ ಹೆಚ್ಚಿದೆ ಎಂದು ಚಿಕ್ಕೋಡಿ ತಹಶೀಲ್ದಾರ ಶುಭಾಸ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
![ಕೃಷ್ಣಾ ನದಿ ತೀರದ ಜನರಲ್ಲಿ ಕಡಿಮೆಯಾದ ಪ್ರವಾಹದ ಆತಂಕ Reduced flood anxiety among people on the banks of the Krishna River](https://etvbharatimages.akamaized.net/etvbharat/prod-images/768-512-8573919-117-8573919-1598505946757.jpg)
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 55,000 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 8,448 ಕ್ಯೂಸೆಕ್ ನೀರು ಹೀಗೆ ಒಟ್ಟು 63,000 ಕ್ಯೂಸೆಕ್ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ- 5 ಮಿ.ಮೀ., ನವಜಾ - 11 ಮಿ.ಮೀ., ಮಹಾಬಲೇಶ್ವರ - 15 ಮಿ.ಮೀ., ವಾರಣಾ - 00 ಮಿ.ಮೀ., ಕಾಳಮ್ಮವಾಡಿ - 00 ಮಿ.ಮೀ., ರಾಧಾನಗರಿ - 00 ಮಿ.ಮೀ., ಪಾಟಗಾಂವ - 00 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಕೊಯ್ನಾ, ನವಜಾ ಹಾಗೂ ಮಹಾಬಲೇಶ್ವರದಲ್ಲಿ ಮಾತ್ರ ಮಳೆಯಾಗಿದ್ದು, ಅತಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ 92%, ವಾರಣಾ ಜಲಾಶಯ 94%, ರಾಧಾನಗರಿ ಜಲಾಶಯ 93%, ಕಣೇರ ಜಲಾಶಯ 92%, ಧೂಮ ಜಲಾಶಯ 96%, ಪಾಟಗಾಂವ 100%, ದೂಧಗಂಗಾ 97% ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 97,000 ಕ್ಯೂಸೆಕ್ ನೀರು ಹಾಗೂ ಆಲಮಟ್ಟಿ ಜಲಾಶಯದಿಂದ 1,00,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.