ಕರ್ನಾಟಕ

karnataka

ETV Bharat / state

ಮಧ್ಯರಾತ್ರಿಯಿಂದಲೇ ಕುಂದಾನಗರಿಯಲ್ಲಿ ಗಣೇಶನ ಭವ್ಯ ಮೆರವಣಿಗೆ! - ಗಣೇಶನ ಭವ್ಯ ಮೆರವಣಿಗೆ

ಕರ್ನಾಟಕದಲ್ಲಿ ಅತ್ಯಂತ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸುವ ನಗರಿ ಕುಂದಾನಗರಿ. ಇಲ್ಲಿ ಮಧ್ಯ ರಾತ್ರಿಯಿಂದಲೇ ಗಣೇಶ ಮೂರ್ತಿಯ ಭವ್ಯ ಮೆರವಣಿಗೆಗಳು ಪ್ರಾರಂಭವಾಗಿವೆ. ನಗರದ ಅನೇಕ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯುತ್ತಿವೆ.

ಗಣೇಶನ ಭವ್ಯ ಮೆರವಣಿಗೆ

By

Published : Sep 2, 2019, 2:51 AM IST

ಬೆಳಗಾವಿ:ಕರ್ನಾಟಕದಲ್ಲಿ ಅತ್ಯಂತ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸುವ ನಗರಿ ಕುಂದಾನಗರಿ. ಇಲ್ಲಿ ಮಧ್ಯ ರಾತ್ರಿಯಿಂದಲೇ ಗಣೇಶ ಮೂರ್ತಿಯ ಭವ್ಯ ಮೆರವಣಿಗೆಗಳು ಪ್ರಾರಂಭವಾಗಿವೆ. ನಗರದ ಅನೇಕ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯುತ್ತಿವೆ.

ಮಧ್ಯ ರಾತ್ರಿಯಿಂದ ಕುಂದಾನಗರಿಯಲ್ಲಿ ಗಣೇಶನ ಭವ್ಯ ಮೆರವಣಿಗೆ

ನಗರದ ಅನೇಕ ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ವಿಶೇಷವಾಗಿ ವಾಹನಗಳನ್ನು ಅಲಂಕರಿಸಿ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯುವ ದೃಶ್ಯ ಸಾಮಾನ್ಯವಾಗಿದೆ. ಗಣೇಶ ಹಬ್ಬದ ವಾತಾವರಣ ಇಡೀ ನಗರದಲ್ಲಿ ವ್ಯಾಪಿಸಿದೆ.

ನಗರದಲ್ಲಿ ನಡೆಯುವ ಭವ್ಯ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಅನೇಕ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಒಟ್ಟಿನಲ್ಲಿ ಮಳೆಯ ಆರ್ಭಟದಿಂದ ನಲುಗಿ ಹೋಗಿದ್ದ ಜನರ ಮೊಗದಲ್ಲಿ ಹಬ್ಬದ ಕಳೆ ಕಂಡುಬಂದಿದ್ದು ವಿಶೇಷ.

ABOUT THE AUTHOR

...view details