ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕ್ರಾಂತಿಕಿಡಿ ರಾಯಣ್ಣ.. ಶೌರ್ಯ, ತ್ಯಾಗಕ್ಕೆ ಸಾಕ್ಷ್ಯಸ್ಥಳ ಈ ನಂದಗಡ.. - British

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸಾವಿರಾರು ಜನ ಪಾದಯಾತ್ರೆಯ ಮೂಲಕ ಇಲ್ಲಿಗೆ ಆಗಮಿಸುತ್ತಾರೆ. ರಾಯಣ್ಣ ಹುಟ್ಟು ಹಬ್ಬದಂದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಹಾಗೂ ಜನವರಿ 26ರಲ್ಲಿ ನೇಣಿಗೇರಿದ ಹಿನ್ನೆಲೆ ಪುಣ್ಯಸ್ಮರಣೆಯ ದಿನವೇ ಗಣರಾಜ್ಯೋತ್ಸವ ಆಚರಣೆ ನಡೆಯುವುದು ವಿಶೇಷ ಎನಿಸಿದೆ. ರಾಯಣ್ಣನ ಸ್ವಾಮಿನಿಷ್ಠೆ ಹಾಗೂ ಬ್ರಿಟಿಷ ವಿರುದ್ಧ ಹೋರಾಟ ಇಂದಿಗೂ ಮಾದರಿಯಾಗಿದೆ..

rayanna-who-lightened-freedom-lamp-for-the-first-time-against-british
ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕ್ರಾಂತಿಕಿಡಿ ರಾಯಣ್ಣ

By

Published : Aug 15, 2021, 7:20 AM IST

ಬೆಳಗಾವಿ :ಕನ್ನಡ ನೆಲದಲ್ಲಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಧೀರ ಕನ್ನಡಿಗ ಅಂದರೆ ಅದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ತಾಯಿ ಚೆನ್ನಮ್ಮಳ ಬಂಟ ರಾಯಣ್ಣರ ಹೆಸರು ಕೇಳಿದ್ರೆ ಬ್ರಿಟಿಷರ ಸದ್ದಡಗುತ್ತಿತ್ತು. ಇಂತಹ ವೀರನ ಹುಟ್ಟೂರಾದ ಬೆಳಗಾವಿಯನ್ನ ಸ್ವಾತಂತ್ರೋತ್ಸವದಂದು ವಿಶೇಷವಾಗಿ ಸ್ಮರಿಸಿಕೊಳ್ಳಲಾಗುತ್ತಿದೆ.

ಬ್ರಿಟಿಷರ ವಿರುದ್ಧ ತೊಡೆತಟ್ಟಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೋಸದ ಬಲೆಗೆ ನೇಣುಗಂಬ ಏರಬೇಕಾಯಿತು. ಇದೇ ಸ್ಥಳವೀಗ ಪುಣ್ಯಸ್ಥಳವಾಗಿದೆ.

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕ್ರಾಂತಿಕಿಡಿ ಸಂಗೊಳ್ಳಿ ರಾಯಣ್ಣ..

ದೇಶದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯಕ್ಕಾಗಿ ಕಹಳೆ ಮೊಳಗಿದಾಗ, ದೊಡ್ಡ ದೊಡ್ಡ ರಾಜರುಗಳೇ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಗದೇ ಕಪ್ಪ ಕಾಣಿಕೆ ಕೊಟ್ಟು ಸುಮ್ಮನಾಗಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತನ್ನ ಸ್ನೇಹಿತರ ಜತೆ ಸೇರಿ ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ್ದ. ಗೆರಿಲ್ಲಾ ಯುದ್ಧ ತಂತ್ರ ಅರಿತಿದ್ದ ಶೂರ ರಾಯಣ್ಣನನ್ನ ನೇಣಿಗೇರಿಸಿದ ಜಾಗ ನಂದಗಡವೀಗ ಶೌರ್ಯ, ತ್ಯಾಗದ ಪ್ರತೀಕವಾಗಿದೆ.

ಆಗಸ್ಟ್​ 15, 1796ರಲ್ಲಿ ರಾಯಣ್ಣ ಜನಿಸಿದ್ದ. ರಾಯಣ್ಣನ ಹುಟ್ಟುಹಬ್ಬ ಹಾಗೂ ಪುಣ್ಯತಿಥಿಯನ್ನು ಸ್ಮರಣೋತ್ಸವ ಸಮಿತಿಯಿಂದ ಪ್ರತಿವರ್ಷ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ರಾಯಣ್ಣನ ಹೋರಾಟ, ತ್ಯಾಗ, ಶೌರ್ಯದ ಬಗ್ಗೆ ಇಂದಿನ ಯುವಕರಿಗೆ ತಿಳಿಸುವ ಯತ್ನ ನಡೆದಿದೆ. ಅಲ್ಲದೇ ಸ್ವಾತಂತ್ರ್ಯ ದಿನದಂದು ನಂದಗಡದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸಾವಿರಾರು ಜನ ಪಾದಯಾತ್ರೆಯ ಮೂಲಕ ಇಲ್ಲಿಗೆ ಆಗಮಿಸುತ್ತಾರೆ. ರಾಯಣ್ಣ ಹುಟ್ಟು ಹಬ್ಬದಂದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಹಾಗೂ ಜನವರಿ 26ರಲ್ಲಿ ನೇಣಿಗೇರಿದ ಹಿನ್ನೆಲೆ ಪುಣ್ಯಸ್ಮರಣೆಯ ದಿನವೇ ಗಣರಾಜ್ಯೋತ್ಸವ ಆಚರಣೆ ನಡೆಯುವುದು ವಿಶೇಷ ಎನಿಸಿದೆ. ರಾಯಣ್ಣನ ಸ್ವಾಮಿನಿಷ್ಠೆ ಹಾಗೂ ಬ್ರಿಟಿಷ ವಿರುದ್ಧ ಹೋರಾಟ ಇಂದಿಗೂ ಮಾದರಿಯಾಗಿದೆ.

ರಾಯಣ್ಣನ ಸಮಾಧಿ ವೀಕ್ಷಣೆಗೆಂದು ಆಗಮಿಸುವ ಜನ ಅಲ್ಲಿ ತೆಂಗಿನಕಾಯಿ ಕಟ್ಟಿ ನನಗೆ ರಾಯಣ್ಣನಂತಹ ಮಗ ಹುಟ್ಟಲಿ ಎಂದು ಹರಕೆ ಹೊರುತ್ತಾರೆ. ಬೇಡಿಕೆ ಈಡೇರಿದ ಬಳಿಕ ಬಂದು ತೊಟ್ಟಿಲು ಕಟ್ಟೋದು ಇಲ್ಲಿ ನಿತ್ಯ ನಡೆಯುತ್ತಲೇ ಇದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇಂತಹ ಹೋರಾಟಗಾರನ ಸ್ಮರಿಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ.

ABOUT THE AUTHOR

...view details