ಕರ್ನಾಟಕ

karnataka

ETV Bharat / state

ಗೈರಾಣ ಜಾಗ ತೆರವುಗೊಳಿಸುವಂತೆ ರಾಯಬಾಗ ತಹಶೀಲ್ದಾರ್​ ಆದೇಶ - ಕಂಕಣವಾಡಿ ಪಟ್ಟಣ

ಕಂಕಣವಾಡಿ ಪಟ್ಟಣದಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಿದ ಶೆಡ್‍ಗಳನ್ನು ತೆರವುಗೊಳಿಸಲು ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡಿದ್ದು, ಪಟ್ಟಣದಲ್ಲಿ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ..

ತಹಶೀಲ್ದಾರ್​ ಆದೇಶ
ತಹಶೀಲ್ದಾರ್​ ಆದೇಶ

By

Published : Jul 3, 2020, 10:16 PM IST

ಚಿಕ್ಕೋಡಿ :ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದ ಗಾಯರಾಣ ಎಂಬಲ್ಲಿ ಅನಧಿಕೃತವಾಗಿ ಕಟ್ಟಲಾಗಿರುವ ಶೆಡ್‍ಗಳನ್ನು 24 ಗಂಟೆಗಳಲ್ಲಿ ತೆರವುಗೊಳಿಸಬೇಕೆಂದು ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿ ಆದೇಶ ಹೊರಡಿಸಿದ್ದಾರೆ.

ಕಂಕಣವಾಡಿಯ ಕೆಲ ವ್ಯಕ್ತಿಗಳು ಅತಿಕ್ರಮಣ ಮಾಡಿರುವ ಸರ್ಕಾರಿ ಗಾಯರಾಣ ಜಾಗವನ್ನು ತೆರವುಗೊಳಿಸಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಇದರಿಂದ 30ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಬಡವರು, ಪ.ಜಾತಿ, ಹಿಂದುಳಿದ ವರ್ಗದ ಜನರು ಆತಂಕಗೊಂಡು ಕಳೆದ ಕೆಲ ದಿನಗಳಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಗೈರಾಣ ಜಾಗ ತೆರವುಗೊಳಿಸುವಂತೆ ರಾಯಬಾಗ ತಹಶೀಲ್ದಾರ್​ ಆದೇಶ

ಬೆಂಬಲಿಗನ ಮನೆಯಲ್ಲಿ ಕುಳಿತ ಬಿಜೆಪಿ ಶಾಸಕನಿಗೆ ಘೇರಾವ್ ಹಾಕಿ ಕಂಕಣವಾಡಿ ಗ್ರಾಮಸ್ಥರು ತರಾಟೆ

ಈಗ ಬೆಳಗಾವಿ ಪ್ರಾದೇಶಿಕ ಆಯುಕ್ತರು ಖಡಕ್ಕಾಗಿ ತಹಶೀಲ್ದಾರ್​ ಅವರಿಗೆ ಆದೇಶ ಮಾಡಿದ್ದರಿಂದ ಅತಿಕ್ರಮಣ ಮಾಡಿ ನಿರ್ಮಿಸಿದ ಶೆಡ್‍ಗಳನ್ನು 24 ಗಂಟೆಗಳಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.

ಕಂಕಣವಾಡಿ ಪಟ್ಟಣದಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಿದ ಶೆಡ್‍ಗಳನ್ನು ತೆರವುಗೊಳಿಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಪಟ್ಟಣದಲ್ಲಿ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ABOUT THE AUTHOR

...view details