ಚಿಕ್ಕೋಡಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಪಿತ್ತಜನಕಾಂಗ ಕಸಿ ಮಾಡಿಸಿಕೊಂಡ ವ್ಯಕ್ತಿಗೆ ಸ್ಥಳೀಯವಾಗಿ ದೊರಕದ ಔಷಧಿಯನ್ನು ಬೆಂಗಳೂರಿನಿಂದ ತರಿಸಿಕೂಟ್ಟು ತಹಶೀಲ್ದಾರ್ ಮಾನವೀಯತೆ ಮೆರೆದಿದ್ದಾರೆ .
ಲಿವರ್ ಕಸಿ ಮಾಡಿಸಿಕೊಂಡ ವ್ಯಕ್ತಿಗೆ ಸ್ವಂತ ಹಣದಲ್ಲಿ ಬೆಂಗಳೂರಿನಿಂದ ಔಷಧ ತರಿಸಿಕೊಟ್ಟ ತಹಶೀಲ್ದಾರ್ - brought medicine from Bangalore
ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರು ಸೇವಿಸುತ್ತಿದ್ದ ಮಾತ್ರೆಗಳು ಮುಗಿದಿದ್ದವು. ಮಾತ್ರೆಗಳಿಲ್ಲದೆ ಮತ್ತೆ ಆರೋಗ್ಯದಲ್ಲಿ ಏರು ಪೇರು ಆಗುವ ಸಾಧ್ಯತೆಗಳಿದ್ದವು. ಈ ಬಗ್ಗೆ ಸ್ಥಳೀಯರು ರಾಯಬಾಗ ತಹಶೀಲ್ದಾರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಪಂದಿಸಿದ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಎರಡು ದಿನಗಳಲ್ಲಿ ಬೆಂಗಳೂರಿನಿಂದ ತಮ್ಮ ಸ್ವಂತ ಹಣದಲ್ಲಿ ಮಾತ್ರೆಗಳನ್ನು ತರಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಸುಭಾಷ್ ಎಂಬಾತ ಕಳೆದ ಎರಡು ವರ್ಷದ ಹಿಂದೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಪಿತ್ತಜನಕಾಂಗ ಕಸಿ ಮಾಡಿಸಿಕೊಂಡಿದ್ದ. ಆಗಿನಿಂದ ಔಷಧಗಳನ್ನು ಸೇವಿಸುತ್ತಿದ್ದು, ಅದಕ್ಕಾಗಿ ತಿಂಗಳಿಗೆ ಏಳು ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರು.