ಕರ್ನಾಟಕ

karnataka

ETV Bharat / state

ಕೋವಿಡ್‌ ಕುರಿತು ನಿಷ್ಕಾಳಜಿ: ರಾಯಬಾಗ ಸಂತೆಯಲ್ಲಿ ಜನಜಂಗುಳಿ - Belgaum Corona News

ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಹರಸಾಹಸ ಪಡುತ್ತಿದೆ. ಆದರೆ, ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಂತೆಯಲ್ಲಿ ಜನಜಂಗುಳಿ ನೆರೆದಿತ್ತು.

Rayabaga people seems least bothered of Kovid
ಕೊವಿಡ್ ಗೆ ಕ್ಯಾರೆ ಎನ್ನದೆ ರಾಯಬಾಗ ಸಂತೆಯಲ್ಲಿ ಭಾಗಿಯಾದ ಜನ

By

Published : Jul 17, 2020, 5:06 PM IST

ಚಿಕ್ಕೋಡಿ (ಬೆಳಗಾವಿ):ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಹರಸಾಹಸ ಪಡುತ್ತಿದೆ. ಆದರೆ, ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಂತೆಯಲ್ಲಿ ಜನ ಜಂಗುಳಿ ಸೇರಿದ್ದು ಕಂಡುಬಂತು.

ಕೊವಿಡ್ ಗೆ ಕ್ಯಾರೆ ಎನ್ನದೆ ರಾಯಬಾಗ ಸಂತೆಯಲ್ಲಿ ಭಾಗಿಯಾದ ಜನ

ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದ್ದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಈಗಾಗಲೇ ಐದು ತಾಲೂಕುಗಳಾದ ಅಥಣಿ, ಕಾಗವಾಡ, ನಿಪ್ಪಾಣಿ, ಗೋಕಾಕ್​, ಮೂಡಲಗಿಯನ್ನು ಲಾಕ್‌ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ.

ಒಂದೆಡೆ ಕೊರೊನಾ ನಿಯಂತ್ರಿಸಲು ರಾಯಬಾಗ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ನಿರ್ಧರಿಸಿದ್ದರೆ ಇತ್ತ ಸ್ಥಳೀಯರು ಕೋವಿಡ್‌ಗೆ ಕ್ಯಾರೆನ್ನದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಂತೆಯಲ್ಲಿ ನೂರಾರು ಮಂದಿ ಮಾಸ್ಕ್​ ಧರಿಸದೆ, ಸಾಮಾಜಿಕ ಅಂತರವನ್ನೂ ಮರೆತು ಭಾಗಿಯಾಗಿ ಕೊರೊನವನ್ನು ಸ್ವಾಗತಿಸಿದಂತೆ ವರ್ತಿಸಿದ್ದಾರೆ.

ABOUT THE AUTHOR

...view details