ಚಿಕ್ಕೋಡಿ (ಬೆಳಗಾವಿ):ಕೋವಿಡ್19 ಮಹಾಮಾರಿ ವಿರುದ್ಧ ಶ್ರಮಿಸುತ್ತಿರುವ ರಾಯಬಾಗ ತಾಲೂಕಿನ ಕೊರೊನಾ ವಾರಿಯರ್ಸ್‌ಗೆ ತಾಲೂಕಿನ ಕಂಕಣವಾಡಿ ನಿವೃತ ಯೋಧರ ಸಂಘ ಜೈ ಜವಾನ್ ಜೈ ಕಿಸಾನ್ ರೂರಲ್ ಆ್ಯಂಡ್ ಅರ್ಬನ್ ಡೆವಲಪ್ಮೆಂಟ್ ಸೂಸೈಟಿ ಮೂಲಕ ಗೌರವಿಸಲಾಯಿತು.
ಚಿಕ್ಕೋಡಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ ನಿವೃತ್ತ ಯೋಧರು - corona case
ಕೊರೊನಾ ಆರಂಭ ಆದಾಗಿನಿಂದ ಹಗಲು ರಾತ್ರಿ ಶ್ರಮಿಸುತ್ತಿರುವ ರಾಯಬಾಗದ ಕೊರೊನಾ ವಾರಿಯರ್ಸ್‌ಗೆ ಇಲ್ಲಿನ ನಿವೃತ್ತ ಸೈನಿಕರ ಸಂಘ ಗೌರವ ಸಲ್ಲಿಸಿದೆ. ಜೈ ಜವಾನ್ ಜೈ ಕಿಸಾನ್ ರೂರಲ್ ಆ್ಯಂಡ್ ಅರ್ಬನ್ ಡೆವಲಪ್ಮೆಂಟ್ ಸೂಸೈಟಿ ಮೂಲಕ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.
![ಚಿಕ್ಕೋಡಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ ನಿವೃತ್ತ ಯೋಧರು Rayabaga: A tribute to the Corona Warriors by retired warriors](https://etvbharatimages.akamaized.net/etvbharat/prod-images/768-512-7491028-104-7491028-1591366788356.jpg)
ರಾಯಬಾಗ: ಕೊರೊನಾ ವಾರಿಯರ್ಸ್‌ಗೆ ನಿವೃತ್ತ ಯೋಧರಿಂದ ಗೌರವ ಸಮರ್ಪಣೆ
ಕಂಕಣವಾಡಿ ಪಟ್ಟಣ ಪಂಚಾಯತಿ ಸಭಾ ಭವನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊರೊನಾ ವೈರಸ್ ವಿರುದ್ಧ ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಕಂದಾಯ, ಪೌರಾಡಳಿತ, ಶಿಕ್ಷಣ ಇಲಾಖೆ, ಹೋಮ್ ಗಾರ್ಡ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೌರಕಾರ್ಮಿಕರು, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಪತ್ರಕರ್ತರನ್ನು ಗೌರವಿಸಲಾಯಿತು.
Last Updated : Jun 5, 2020, 8:35 PM IST